Saturday, August 15, 2026

BDA Apartments

Home Front Page ಆರ್ಥಿಕ ಕುಸಿದ: ಆರ್‌ಬಿಐ  ಗವರ್ನರ್ ಮಹತ್ವದ ಸಭೆ ಇಂದು

ಆರ್ಥಿಕ ಕುಸಿದ: ಆರ್‌ಬಿಐ  ಗವರ್ನರ್ ಮಹತ್ವದ ಸಭೆ ಇಂದು

ನವದೆಹಲಿ, ಮೇ 02, 2020 (www.justkannada.in): ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್ ಇಂದು ಬ್ಯಾಂಕ್ ಮುಖ್ಯಸ್ಥರೊಂದಿಗೆ ಸಭೆ ನಡೆಸಲಿದ್ದಾರೆ.

ಹಣಕಾಸು ಕ್ಷೇತ್ರದ ಬಗ್ಗೆ ಮಹತ್ವದ ಸಭೆಯನ್ನು ಇಂದು ಆರ್ ಬಿಐ ಗೌವರ್ನರ್ ನಡೆಸಲಿದ್ದಾರೆ.

ಸಭೆಯಲ್ಲಿ ಅವರು ಕರೋನಾ ವೈರಸ್‌ನಿಂದ ಉಂಟಾಗಿರುವ ದೇಶದ ಆರ್ಥೀಕ ವ್ಯವಸ್ಥೆಯ ಮೇಲಿನ ಪ್ರಭಾವ ಹಾಗೂ ಪರಿಣಾಮ ಸೇರಿದಂತೆ ಕರೋನ ವೈರಸ್‌ನಿಂದ ಉಂಟಾಗಿರುವ ಉದ್ಯಮಗಳ ಬಿಕ್ಕಟ್ಟನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಯಾವ ರೀತಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುವುದರ ಬಗ್ಗೆ ಚರ್ಚಿಸಲಿದ್ದಾರೆ. ಎಲ್ಲ ಬ್ಯಾಂಕ್ಗಳ ಮುಖ್ಯಸ್ಥರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.