5 ವರ್ಷ ನಾನೇ ಸಿಎಂ ಅಂತಾ ಹೇಳುವುದಕ್ಕೂ ‘ವ್ಯಾಕ್ಸಿನ್’ ಕಾರಣ- ಸಿದ್ದರಾಮಯ್ಯ ವಿರುದ್ದ ಡಿವಿಎಸ್ ಸಿಡಿಮಿಡಿ

ಬೆಂಗಳೂರು,ಜುಲೈ,5,2025 (www.justkannada.in):  ಹೃದಯಾಘಾತಕ್ಕೆ ವ್ಯಾಕ್ಸಿನ್ ಕಾರಣ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತು ಸಿಡಿಮಿಡಿಗೊಂಡ ಮಾಜಿ ಸಿಎಂ ಡಿ.ವಿ ಸದಾನಂದ ಗೌಡ, 5 ವರ್ಷ ನಾನೇ ಸಿಎಂ ಅಂತಾ ಹೇಳುವುದಕ್ಕೂ ‘ವ್ಯಾಕ್ಸಿನ್’ ಕಾರಣ ಎಂದು ತಿರುಗೇಟು ನೀಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿ.ವಿ ಸದಾನಂದಗೌಡ,  ಓಡಿ ಹೋಗಿ  ಕ್ಯೂನಲ್ಲಿ ನಿಂತು ವ್ಯಾಕ್ಸಿನ್ ತೆಗೆದುಕೊಂಡವರು ಸಿಎಂ ಸಿದ್ದರಾಮಯ್ಯ ಅವರೇ . ಓಡಿಹೋಗಿ ಮೊದಲು ವ್ಯಾಕ್ಸಿನ್ ತೆಗೆದುಕೊಂಡವರು ಅವರೇ.   5 ವರ್ಷ ನಾನೇ ಸಿಎಂ ಅಂತಾ ಹೇಳೋದಕ್ಕೂ ವ್ಯಾಕ್ಸಿನ್ ಕಾರಣ. ಜವಾಬ್ದಾರಿ ಸ್ಥಾನದಲ್ಲಿರುವ ಸಿದ್ದರಾಮಯ್ಯ ಆಲೋಚಿಸಿ ಮಾತನಾಡಬೇಕು ಎಂದು ಕಿಡಿಕಾರಿದರು.

ಆರ್ ಎಸ್ ಎಸ್ ಅನ್ನು ಕಾಂಗ್ರೆಸ್ ಮುಟ್ಟಿ ನೋಡಲಿ.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ ಎಸ್ ಬ್ಯಾನ್  ಎಂದು ಹೇಳಿಕೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆಗೆ ತಿರುಗೇಟು ನೀಡಿದ ಡಿ.ವಿ ಸದಾನಂದಗೌಡ, ಆರ್ ಎಸ್ ಎಸ್ ನಿಷೇಧ ಸಾಧ್ಯವೇ ಇಲ್ಲದ ಮಾತು.  ಪ್ರಿಯಾಂಕ್ ಖರ್ಗೆ ಸ್ವಲ್ಪ ಮಟ್ಟಿಗೆ ವ್ಯಾಪ್ತಿ ಮೀರಿ ಹೋಗುತ್ತಿದ್ದಾರೆ.  ಹುಚ್ಚರಿಗೆ ಉತ್ತರ ಕೊಡಬೇಕಾದ ಅವಶ್ಯಕತೆ ಇಲ್ಲ  ಕಾಂಗ್ರೆಸ್ ಪಕ್ಷಕ್ಕೆ ಮುಂದೆ ಅಧಿಕಾರಕ್ಕೆ ಬರುವ ಯೋಗ್ಯತೆ ಇಲ್ಲ, ಆರ್ ಎಸ್ಎಸ್ ಅನ್ನು ಕಾಂಗ್ರೆಸ್ ಮುಟ್ಟಿ ನೋಡಲಿ. ಮೊದಲೇ ಇವರು ಭಸ್ಮ ಆಗಿ ಹೋಗಿದ್ದಾರೆ. ಆರ್ ಎಸ್ ಎಸ್ ಮುಟ್ಟಿದರೇ ಇವರ ಭಸ್ಮ ಕೂಡ ಗಾಳಿಯಲ್ಲಿ ಹಾರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಬಿಜೆಪಿಯಲ್ಲಿ ಆಂತರಿಕ ಗೊಂದಲ ಕುರಿತು ಪ್ರತಿಕ್ರಿಯಿಸಿದ ಡಿವಿಎಸ್, ಎಲ್ಲಾ ಪಕ್ಷಗಳಲ್ಲಿ ಆಂತರಿಕ ಗೊಂದಲಗಳು ಸಹಜ. ಆಂತರಿಕ ಗೊಂದಲಗಳು ಒಂದು ವ್ಯಾಪ್ತಿಯಲ್ಲಿ ಇರುತ್ತವೆ.  ಆಂತರಿಕ ಗೊಂದಲವೇ ಪಕ್ಷಕ್ಕೆ ಮುಳುವಾಗುವಂತದ್ದು ನೋಡಿದ್ದೇವೆ ಬಿಜೆಪಿ ಪೂರ್ಣ ಹೈಕಮಾಂಡ್ ಆಧಾರಿತ ಪಕ್ಷ ಅಲ್ಲ. ಸ್ಥಳೀಯ ವಿಷಯಗಳಲ್ಲಿ ಸ್ಥಳೀಯ ನಾಯಕರೇ ಪರಿಹಾರ ನೀಡಬೇಕು.  ಆಂತರಿಕ ಭಿನ್ನಮತವೇ ಕಳೆದ ಚುನಾವಣೆಯ ಹಿನ್ನೆಡೆಗೆ ಕಾರಣ . ಈಗ ಒಂದು ರೀತಿಯ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದೆ  ಎಂದರು.vtu

Key words: ‘Vaccine, CM, 5 years, DV Sadananda gowda, Siddaramaiah