Saturday, August 8, 2026

BDA Apartments

Home Election 2024 ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ ಗೆ ಸೋಲಿನ ಭೀತಿ- ಜೆಡಿಎಸ್ ತೀವ್ರ ವಾಗ್ದಾಳಿ

ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ ಗೆ ಸೋಲಿನ ಭೀತಿ- ಜೆಡಿಎಸ್ ತೀವ್ರ ವಾಗ್ದಾಳಿ

ಬೆಂಗಳೂರು,ಏಪ್ರಿಲ್,12,2024 (www.justkannada.in):  ನಿನ್ನೆ ತಡರಾತ್ರಿ ಮಿಡ್ ನೈಟ್ ಆಪರೇಷನ್ ಮಾಡಿಸಿದ ಡಿಸಿಎಂ ಡಿಕೆ ಶಿವಕುಮಾರ್ 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರನ್ನ ಕಾಂಗ್ರೆಸ್ ಸೇರ್ಪಡೆ ಮಾಡಿಸಿದ್ದರು ಎನ್ನಲಾಗಿತ್ತು.  ಈ ಕುರಿತು ಜೆಡಿಎಸ್ ಘಟಕ ಟ್ವೀಟ್ ಮಾಡಿ ತಿರುಗೇಟು ನೀಡಿದೆ.

ಈ ಬಗ್ಗೆ ಟ್ವೀಟ್ ಮಾಡಿರುವ ಜೆಡಿಎಸ್, ಕಾಂಗ್ರೆಸ್ಸಿಗರಿಗೆ, ಅದರಲ್ಲೂ ಡೂಪ್ಲಿಕೇಟ್ ಸಿಎಂ ಡಿಕೆ ಶಿವಕುಮಾರ್ ಅವರಿಗೆ ಸೋಲಿನ ಭೀತಿ ಎಷ್ಟರಮಟ್ಟಿಗೆ ಕಾಡುತ್ತಿದೆ ಎಂದರೆ, ಯುವ ಕಾಂಗ್ರೆಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಶಾಲು ಹಾಕಿ, ಅವರನ್ನು ಜೆಡಿಎಸ್ ಕಾರ್ಯಕರ್ತರು ಎಂದು ಬಿಂಬಿಸಿ, ಅವರೆಲ್ಲ ಕಾಂಗ್ರೆಸ್ ಸೇರಿದ್ದಾರೆ ಎಂದು ಪ್ರಚಾರ ಪಡೆಯುತ್ತಿದ್ದಾರೆ.

ಸೋಲಿನ ಭೀತಿ, ಹತಾಶೆ ಎಂತೆಂತಹ ಗಿಮಿಕ್ ಗಳನ್ನು ಮಾಡಿಸುತ್ತದೆ ಎನ್ನುವುದಕ್ಕೆ ಇದು ಜೀವಂತ ಸಾಕ್ಷಿ ಎಂದು ಜೆಡಿಎಸ್ ಟಾಂಗ್ ಕೊಟ್ಟಿದೆ.

Key words:  duplicate CM, DK Shivakumar, JDS