ಬಳ್ಳಾರಿಗೆ 30 ಸಚಿವರು ಬಂದ್ರೂ ಬಿಜೆಪಿ ಅಭ್ಯರ್ಥಿ ಮಣಿಸಲು ಆಗಲ್ಲ- ಬಿವೈ ವಿಜಯೇಂದ್ರ.

ಬಳ್ಳಾರಿ,ಏಪ್ರಿಲ್,12,2024 (www.justkannada.in): ಬಳ್ಳಾರಿಗೆ ಮೂವರಲ್ಲ 30 ಸಚಿವರು ಬರಲಿ ಬಿಜೆಪಿ ಅಭ್ಯರ್ಥಿ ಮಣಿಸಲು ಆಗಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಸವಾಲು ಹಾಕಿದರು.

ಬಳ್ಳಾರಿಯಲ್ಲಿ ಇಂದು ಮಾತನಾಡಿದ ಬಿವೈ ವಿಜಯೇಂದ್ರ, ಬಳ್ಳಾರಿಯಲ್ಲಿ ಕಾಂಗ್ರೆಸ್ ಆಟ ನಡೆಯಲ್ಲ. 30 ಸಚಿವರು ಬಂದರೂ ಬಿಜೆಪಿ ಅಭ್ಯರ್ಥಿ ಮಣಿಸಲು ಆಗಲ್ಲ. ಬಿಜೆಪಿ ಅಭ್ಯರ್ಥಿ ಶ್ರೀರಾಮುಲು ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದ ಕಾಂಗ್ರೆಸ್ ಸರಕಾರ ಜನರಿಗೆ ಕಿವಿಗೆ ಹೂ ಮುಡಿಸಿದೆ. ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೊಡುತ್ತಿರುವ ಅಕ್ಕಿಯನ್ನು ತಮ್ಮ ಫೋಟೋ ಹಾಕಿದ ಸಿದ್ದರಾಮಯ್ಯ, ಇದು ತಮ್ಮ ಅಕ್ಕಿ ಎಂದು ಬಿಂಬಿಸಿದ್ದಾರೆ. ನಮ್ಮ ರಾಜ್ಯದ 28 ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಗೆದ್ದು ದಾಖಲೆ ಮಾಡುವುದು ಖಚಿತ, ಕಾಂಗ್ರೆಸ್ ಸರಕಾರದಿಂದ ಅಭಿವೃದ್ಧಿ ಆಗಲು ಸಾಧ್ಯವಿಲ್ಲ, ಅಭಿವೃದ್ಧಿ ಶೂನ್ಯ ಸರಕಾರವಾಗಿದೆ ಎಂದು ಬಿವೈ ವಿಜಯೇಂದ್ರ ಟೀಕಿಸಿದರು.

Key words: Bellary- cannot –lose- BJP -candidate – BY Vijayendra.