ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ : ಮಾಜಿ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ…!

ಬೆಂಗಳೂರು,ಡಿಸೆಂಬರ್,23,2020(www.justkannada.in) : ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ.  ಸರ್ಕಾರವು ಹೊಸ ರೂಪದ ಕೊರೊನಾ ವೈರಸ್ ಸೋಂಕು ನಿಯಂತ್ರಣಕ್ಕೆ ತಕ್ಷಣ ಕ್ರಮಕೈಗೊಳ್ಳಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

Due,last,time,negligence,Remember,lesson,disaster,Former,CM Siddaramaiah,warns ...

ಹೊಸ ರೂಪದೊಂದಿಗೆ ಕಾಣಿಸಿಕೊಂಡಿರುವ ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕೆ ತಜ್ಞರ ಸಲಹೆಯೊಂದಿಗೆ ಸರ್ಕಾರವು ತಕ್ಷಣ ಮುನ್ನೆಚ್ಚರಿಕೆಯ ಕ್ರಮಗಳಿಗೆ ಮುಂದಾಗಬೇಕು.

ಕಳೆದ ಬಾರಿಯ ನಿರ್ಲಕ್ಷ್ಯದಿಂದಾಗಿರುವ ದುಷ್ಪರಿಣಾಮದ ಪಾಠ ನೆನಪಲ್ಲಿರಲಿ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ರೂಪಾಂತರಿ‌ ಕೊರೊನಾ ವೈರಸ್‌ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು‌ ನಿರ್ಲಕ್ಷ್ಯ ಮಾಡದೆ ಕಡ್ಡಾಯವಾಗಿ ಮಾಸ್ಕ್ ಹಾಕಿ, ಸಾನಿಟೈಸರ್ ಬಳಸಿ,‌‌ ದೈಹಿಕ‌ ಅಂತರ ಕಾಪಾಡಿ ಸಹಕರಿಸಬೇಕು ಎಂದು ಮನವಿ ಮಾಡಿದ್ದಾರೆ.

Due,last,time,negligence,Remember,lesson,disaster,Former,CM Siddaramaiah,warns ...
siddaramaih#profile..

ರೂಪಾಂತರಿ‌ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ತಕ್ಷಣ ರಾಜ್ಯದ ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಕಟ್ಟುನಿಟ್ಟಿನ ಪರೀಕ್ಷಗೆ ಒಳಪಡಿಸಬೇಕು. ಇದರಲ್ಲಿ‌ ರಿಯಾಯಿತಿ, ವಿನಾಯಿತಿ, ನಿರ್ಲಕ್ಷ್ಯ ಸಲ್ಲದು ಎಂದು ತಿಳಿಸಿದ್ದಾರೆ.

key words : Due-last-time-negligence-Remember-lesson- disaster-Former-CM Siddaramaiah-warns …