ಡ್ರಗ್ಸ್ ಮಾಫಿಯಾ ಸತತ ಮೂರುವರೆ ಗಂಟೆ ಅನುಶ್ರೀ ವಿಚಾರಣೆ

ಮಂಗಳೂರು,ಸೆಪ್ಟೆಂಬರ್,26,2020(www.justkannada.in) : ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ನಟಿ, ನಿರೂಪಕಿ ಅನುಶ್ರೀ ಅವರನ್ನು ಸತತ ಮೂರುವರೆ ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿದೆ.  jk-logo-justkannada-logo

ಡಿಸಿಪಿ ವಿನಯ್ ಗಾಂವ್ಕರ್ ನೇತೃತ್ವದಲ್ಲಿ ವಿಚಾರಣೆ ನಡೆಸಿದ್ದು, ತರುಣ್ ರಾಜ್ ನನಗೆ 12 ವರ್ಷಗಳ  ಹಿಂದಿನ ಪರಿಚಯ. ತರುಣ್ ರಾಜ್ ನನಗೆ 6 ತಿಂಗಳು ಡ್ಯಾನ್ಸ್ ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವೇಳೆ ತರುಣ್ ರಾಜ್ ಪರಿಚಯವಾಗಿತ್ತು. ಡ್ರಗ್ಸ್ ಬಗ್ಗೆ ತರಣ್ ಜೊತೆ ಯಾವುದೇ ಸಂಬಂಧವಿಲ್ಲ ಎಂದು ಅನುಶ್ರೀ ಮಾಹಿತಿ ನೀಡಿದ್ದಾರೆ.

Drugs,Mafia,Three,half,hour,trial

ಪೊಲೀಸರು ಇವತ್ತು ಕೇಳಿದ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡಿದ್ದೇನೆ. ಮುಂದೆ ವಿಚಾರಣೆಗೆ ಕರೆದರೆ ಮತ್ತೆ ಹಾಜರಾಗುತ್ತೇನೆ. ಇವತ್ತು ಮುಂದಿನ ವಿಚಾರಣೆ ಬಗ್ಗೆ ಪೋಲಿಸರು ಏನೂ ಹೇಳಿಲ್ಲ. ಡ್ರಗ್ ಮಾಫಿಯಾ ರಾಜ್ಯಕ್ಕೆ ಅಂಟಿರುವ ಭೂತ. ಆ ಭೂತವನ್ನು ಹೋಗಲಾಡಿಸಲು ಪೋಲಿಸರು ಪ್ರಯತ್ನ ಮಾಡುತ್ತಿದ್ದಾರೆ. ಅವರಿಗೆ ನಾವು ಸಹಕಾರ ನೀಡಬೇಕು ಎಂದು ಪೊಲೀಸ್ ವಿಚಾರಣೆ ಬಳಿಕ ನಿರೂಪಕಿ ಅನುಶ್ರೀ ಹೇಳಿದ್ದಾರೆ.

key words : Drugs-Mafia-Three-half-hour-trial