ನಕಲಿ ಯುನಿವರ್ಸಿಟಿ ಕಾರ್ಯಕ್ರಮದಲ್ಲಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ವಶ : ಡಿಸಿಪಿ ಪ್ರಕಾಶ್ ಗೌಡ

ಮೈಸೂರು,ಸೆಪ್ಟೆಂಬರ್,26,2020(www.justkannada.in) :  ನಕಲಿ ಯುನಿವರ್ಸಿಟಿ ಹೆಸರಿನ ಕಾರ್ಯಕ್ರಮದ ಮೇಲೆ ದಾಳಿ ಮಾಡಿ 150 ನಕಲಿ ಡಾಕ್ಟರೇಟ್ ಸರ್ಟಿಫಿಕೇಟ್ ಹಾಗೂ ವಿವಿಧ ದಾಖಲೆಗಳು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಕಾಶ್ ಗೌಡ ತಿಳಿಸಿದ್ದಾರೆ.jk-logo-justkannada-logo

ನಗರದ ಖಾಸಗಿ ಹೋಟೆಲ್ ನಲ್ಲಿ ನಕಲಿ ಯುನಿವರ್ಸಿಟಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ದಾಳಿ ಮಾಡಿ ತಮಿಳುನಾಡು ಮೂಲದ ನಂಬಿಯಾರ್ ಹಾಗೂ ಶ್ರೀನಿವಾಸ್ ಎಂಬವರನ್ನು ವಶಕ್ಕೆ ಪಡೆಯಲಾಗಿದೆ. ಈ ಸಂದರ್ಭ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಹರಿಹರ ಶಾಸಕ ರಾಮಪ್ಪ ಅವರಿಗೆ ನಕಲಿ ಯುನಿವರ್ಸಿಟಿಯ ಪ್ರಶಸ್ತಿ ಪಡೆಯದಂತೆ ಮನವೊಲಿಸಲಾಯಿತು ಎಂದರು.

150 Fake,Doctorate,Certificate,Fake,University,Program,DCP Prakash Gowda

ಇಂಟರ್ ನ್ಯಾಷನಲ್ ಗ್ಲೋಬಲ್ ಪೀಸ್ ಹೆಸರಿನ ನಕಲಿ ಯುನಿವರ್ಸಿಟಿಯಾಗಿದ್ದು, ಕಳೆದ ಎಂಟು ವರ್ಷದಿಂದ ಇದೇ ರೀತಿ ಪ್ರಶಸ್ತಿ ನೀಡುತ್ತಿದೆ, ಒಂದು ಪ್ರಶಸ್ತಿಗೆ 15 ಸಾವಿರದಿಂದ 1 ಲಕ್ಷದ ಹಣಕೊಟ್ಟು ಪ್ರಶಸ್ತಿ ಪಡೆಯಲಾಗುತ್ತಿತ್ತು ಎಂದು ತಿಳಿದು ಬಂದಿದ್ದು, ಪ್ರಕರಣ ಸಂಬಂಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ.

key words : 150 Fake-Doctorate-Certificate-Fake-University-Program-DCP Prakash Gowda