ಡ್ರಗ್ಸ್ ಆರೋಪ ಸಾಬೀತಾದ್ರೆ ನನ್ನನ್ನು ಗಲ್ಲಿಗೆ ಹಾಕಲಿ- ಶಾಸಕ ಜಮೀರ್ ಅಹ್ಮದ್ ಖಾನ್ 

ಬೆಂಗಳೂರು, ಸೆಪ್ಟೆಂಬರ್,12,2020(www.justkannada.in): ಡ್ರಗ್ಸ್ ಜಾಲದಲ್ಲಿರುವುದು ಸಾಬೀತಾದರೆ ನನ್ನನ್ನು ಗಲ್ಲಿಗೆ ಹಾಕುವಂತೆ ನ್ಯಾಯಾಧೀಶರಿಗೆ ಲಿಖಿತವಾಗಿ ಬರೆದುಕೊಡುತ್ತೇನೆ ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಕಿಡಿಕಾರಿದರು.

jk-logo-justkannada-logo

ಸ್ಯಾಂಡಲ್ ವುಂಡ್ ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸಮಾಜ ಸೇವಕ ಪ್ರಶಾಂತ್ ಸಂಬರಗಿ ಶಾಸಕ ಜಮೀರ್ ಅಹ್ಮದ್ ಖಾನ್ ಮೇಲೂ ಆರೋಪ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಜಮೀರ್ ಪ್ರಶಾಂತ್ ಸಂಬರಗಿಯ ಮೇಲೆ ದೂರು ದಾಖಲಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಕೊಲಂಬೊ ಕ್ಯಾಸಿನೋಗಿ ಹೊಗಿದ್ದು ನಿಜ. ಒಂದೂವರೆ ವರ್ಷಕ್ಕೊಮ್ಮೆ ಕೊಲಂಬೊಗೆ ಹೋಗುತ್ತೇನೆ. ಪಾಕಿಸ್ತಾನಕ್ಕೆ ಅಲ್ಲ. ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ ನ 28 ಶಾಸಕರು ಹೋಗಿದ್ದರು. ನನ್ನ ಮೇಲೆ ಡ್ರಗ್ಸ್ ನಂಟು ಸಾಬೀತಾದರೆ ಗಲ್ಲಿಗೆ ಹಾಕಲಿ ಎಂದು ಹೇಳಿದ್ದಾರೆ.

Drugs-allege-Galli-wrote-writing-Lawyer-Zamir Ahmad Khan

ಡ್ರಗ್ಸ್ ಜಾಲಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಪ್ರಶಾಂತ್ ಸಂಬರಗಿ ಪ್ರಚಾರಕ್ಕಾಗಿ ಹೀಗೆ ಮಾಡುತ್ತಿದ್ದು, ದಾಖಲೆಗಳಿದ್ದರೆ ಹಾಜರುಪಡಿಸಲಿ. ನಾನು ಸಂಜನಾ ಜೊತೆಗೆ ಕೊಲಂಬೋಗೆ ಹೋಗಿರುವುದು ಸಾಬೀತಾದರೆ, ನನ್ನ ಆಸ್ತಿಯನ್ನು ಸರಕಾರಕ್ಕೆ ಬರೆದುಕೊಡುವೆ.

ನಾನು ಹೋಗಿದ್ದು ಕೊಲಂಬೊಗೆ ಪಾಕಿಸ್ತಾನಕ್ಕೆ ಅಲ್ಲ. ಸರಕಾರದ ಮೇಲೆ ನಂಬಿಕೆಯಿದೆ. ಮುಕ್ತ ತನಿಖೆಯಾಗಲಿ. ಲೀಗಲ್ ಆಗಿರುವ ಕ್ಯಾಸಿನೊ ಗೆ ಹೋಗುವುದು ತಪ್ಪಾ ಎಂದು ಪ್ರಶ್ನಿಸಿದ್ದಾರೆ.

key words : Drugs-allege-Galli-wrote-writing-Lawyer-Zamir Ahmad Khan