Friday, October 2, 2026

BDA Apartments

You should utilize any platform that you get to learn: Nagathihalli Chandrashekar BDA JK_Adv BDA Adv
Home Front Page ದೊಡ್ಡವರು-ಸಣ್ಣವರು ಅನ್ನೋದು ಬೇಡ: ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರೂ ಕ್ರಮ ಕೈಗೊಳ್ಳಲಿ- ಮಾಜಿ ಸಿಎಂ ಸಿದ್ಧರಾಮಯ್ಯ…

ದೊಡ್ಡವರು-ಸಣ್ಣವರು ಅನ್ನೋದು ಬೇಡ: ಡ್ರಗ್ಸ್ ಜಾಲದಲ್ಲಿ ಯಾರೇ ಇದ್ರೂ ಕ್ರಮ ಕೈಗೊಳ್ಳಲಿ- ಮಾಜಿ ಸಿಎಂ ಸಿದ್ಧರಾಮಯ್ಯ…

ಹುಬ್ಬಳ್ಳಿ,ಸೆಪ್ಟಂಬರ್,14,2020(www.justkannada.in):   ರಾಜ್ಯದಲ್ಲಿ ಡ್ರಗ್ಸ್ ದಂಧೆ ಪ್ರಕರಣ ಸಂಬಂಧ ಡ್ರಗ್ಸ್ ಜಾಲದಲ್ಲಿ ಯಾರೇ ಇದ್ದರೂ ಕ್ರಮ ಕೈಗೊಳ್ಳಲಿ. ದೊಡ್ಡವರು-ಸಣ್ಣವರು ಎನ್ನುವುದು ಬೇಡ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ತಿಳಿಸಿದ್ದಾರೆ.jk-logo-justkannada-logo

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಜತೆ ಮಾತನಾಡಿದ ಮಾಜಿ ಸಿಎಂ ಸಿದ್ಧರಾಮಯ್ಯ, ಶಾಸಕ ಜಮೀರ್ ವಿರುದ್ಧ ಸಾಕ್ಷ್ಯ ಇದ್ದರೇ ಕ್ರಮ ಕೈಗೊಳ್ಳಲಿ.  ಸಂಬರಗಿ ಹೇಳಿದರು ಅಂತಾ ತನಿಖೆ ಮಾಡೋಕೆ ಆಗುತ್ತಾ..? ಸಾಕ್ಷ್ಯ ಇದ್ರೆ ಯಾರನ್ನಾದ್ರು ತನಿಖೆ ಮಾಡಲಿ ಯಾರೇ ರಾಜಕಾರಣಿಗಳು ಆದ್ರೂ ಸರಿ ತಪ್ಪು ಮಾಡಿದ್ರೆ ಕ್ರಮ ಕೈಗೊಳ್ಳಲಿ ಎಂದು ನುಡಿದರು.

ಕೇಂದ್ರದಿಂದ ಇನ್ನು ನೆರೆ ಪರಿಹಾರ ಬಂದಿಲ್ಲ. ರಾಜ್ಯದಲ್ಲಿ 25 ಸಂಸದರು ಇದ್ರು ಪ್ರಯೋಜನವಾಗಿಲ್ಲ. ಕಳೆದ ವರ್ಷ ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ. ಆದರೆ, ಇದುವರೆಗೂ ಪರಿಹಾರ ನೀಡಿಲ್ಲ, ರಾಜ್ಯ ಸರ್ಕಾರದ ವೈಪಲ್ಯ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಅಧಿವೇಶನದಲ್ಲಿ ಚರ್ಚಿಸುತ್ತೇವೆ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words: drug case- take-action-anyone-  Former CM -Siddaramaiah.