ರಾಜಕೀಯಕ್ಕಾಗಿ ಬಿಜೆಪಿಯವರಿಂದ ಬರ ಅಧ್ಯಯನ-ಸಿಎಂ ಸಿದ್ದರಾಮಯ್ಯ ಟೀಕೆ.

ಬೆಂಗಳೂರು,ನವೆಂಬರ್,7,2023(www.justkannada.in):  ರಾಜ್ಯ ಬಿಜೆಪಿ ನಾಯಕರು ರಾಜಕೀಯಕ್ಕಾಗಿ ಬರ ಅಧ್ಯಯನ ಪ್ರವಾಸ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಟೀಕಿಸಿದರು.

ಈ ಕುರಿತು ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಕೇಂದ್ರ ಸರ್ಕಾರವೇ ಬರ ಅಧ್ಯಯನ ಮಾಡಿದೆ. ಇವರೇನು ಅಧ್ಯಯನ ಮಾಡುತ್ತಾರೆ? ನಾವು ಕೂಡ ಬರ ಅಧ್ಯಯನ ಮಾಡಿದ್ದೀವಿ. ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕೆ ಹೋಗುತ್ತಿದ್ದಾರೆ. ಕೇಂದ್ರ ತಂಡ ಅಧ್ಯಯನ ಮಾಡಿ ಹೋಗಿದೆ, ಆದರೆ ವರದಿ ನೀಡಿಲ್ಲ. ಮೊದಲು ಕೇಂದ್ರ ಸರ್ಕಾರದ ಬಳಿ ಚರ್ಚಿಸಿ ಅನುದಾನ ಕೊಡಿಸಲಿ ಎಂದು ಕಿಡಿಕಾರಿದರು.

ಬರ ಅಧ್ಯಯನ ಮಾಡಬಾರದು ಅಂತಾ ನಾವು ಹೇಳಲು ಹೋಗಲ್ಲ. ಕೇಂದ್ರ ಸರ್ಕಾರದ ಬಳಿ 17,900 ಕೋಟಿ ರೂ. ಪರಿಹಾರ ಕೇಳಿದ್ದೇವೆ. 33,700 ಕೋಟಿ ನಷ್ಟವಾಗಿದೆ, ಅದನ್ನ ಮೊದಲು ಕೊಡಿಸಲಿ. ಬಿಜೆಪಿಯ 25 ಸಂಸದರಿದ್ದಾರಲ್ಲ ಚರ್ಚಿಸಿ ಅನುದಾನ ಕೊಡಿಸಲಿ. ನಮ್ಮ ಸಚಿವರ ಭೇಟಿಗೆ ಕೇಂದ್ರ ಸರ್ಕಾರ ಸಮಯವನ್ನೇ ಕೊಟ್ಟಿಲ್ಲ ಸಿಎಂ ಸಿದ್ಧರಾಮಯ್ಯ ಹರಿಹಾಯ್ದರು.

Key words: Drought- study -BJP – politics-CM Siddaramaiah