ಮೈಸೂರು, ಡಿ.೦೯,೧೨,೨೦೨೫: ಕನ್ನಡದ ಅನ್ಯೋನ್ಯ ನಟ, ಮೇಲ್ಮನಸ್ಸಿನ ಮಹಾನ್ ವ್ಯಕ್ತಿ ಡಾ. ರಾಜ್ ಕುಮಾರ್ ಅವರ ಜೀವನದ ದೊಡ್ಡ ಗುಣವೆಂದರೆ ಸರಳತೆ. ಇಂಥ ಅಪರೂಪದ ಮೇರು ನಟರ ಅಪರೂಪದ ವಸ್ತುವೊಂದು ಈಗ ಗಮನ ಸೆಳೆದಿದೆ.
ಅದೇ ಅಣ್ಣಾವ್ರ ವಿಸಿಟಿಂಗ್ ಕಾರ್ಡ್. ರಾಜ್ಕುಮಾರ್ ಅವ್ರಿಗೂ ವಿಸಿಟಿಂಗ್ ಕಾರ್ಡಾ..? ಎಂದು ಆಶ್ಚರ್ಯ ಪಡಬೇಡಿ. ಅಣ್ಣಾವ್ರ ಸಹ ಒಂದು ವಿಸಿಟಿಂಗ್ ಕಾರ್ಡ್ ಹೊಂದಿದ್ದರು. ಕಡು ನೀಲಿ ಬಣ್ಣದ ಹಿನ್ನೆಲೆಯ ಬಿಳಿ ಅಕ್ಷರದ ಈ ವಿಸಿಟಿಂಗ್ ಕಾರ್ಡ್ ಅನ್ನು ಅವರ ಪರಮಾಪ್ತರು ಆದ ಕೆ.ಎಂ.ಎಫ್ ನ ಮಾಜಿ ಮುಖ್ಯಸ್ಥರಾದ ಎಂ.ಎಸ್.ಪ್ರೇಮ್ ನಾಥ್ ಅವರು ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಈ ಕಾರ್ಡ್ ನಲ್ಲಿ ಡಾ. ರಾಜ್ ಕುಮಾರ್ ಅವರ ಮದರಾಸು ಹಾಗೂ ಬೆಂಗಳೂರು ಸದಾಶಿವನಗರದ ನಿವಾಸದ ವಿಳಾಸ ಇದೆ. ಆರು ಅಂಕಿಗಳನ್ನು ಒಳಗೊಂಡ ಸ್ಥಿರದೂರವಾಣಿ ಸಂಖ್ಯೆಯನ್ನು ಕಾರ್ಡ್ ನಲ್ಲಿ ನಮೂದಿಸಲಾಗಿದೆ. ಇದನ್ನು ಗಮನಿಸಿದರೆ ಈ ಕಾರ್ಡ್ ೧೯೭೦-೮೦ ರ ದಶಕದ ಆಸುಪಾಸಿನದ್ದು ಇರಬಹುದು ಎಂದು ಅಂದಾಜಿಸಲಾಗಿದೆ.

ಚಲನಚಿತ್ರ ಲೋಕದಲ್ಲಿ ಅಸಾಧಾರಣ ಯಶಸ್ಸು, ಜನಪ್ರಿಯತೆ, ಕೋಟಿ ಅಭಿಮಾನಿಗಳ ಪ್ರೀತಿ ಇದ್ದರೂ ಅವರ ನಡೆ-ನಡತೆಯಲ್ಲಿ ಯಾವತ್ತೂ ಅಹಂಕಾರ ಇರಲಿಲ್ಲ. ಗ್ರಾಮೀಣ ಮಣ್ಣಿನ ಮೃದುವಾದ ನಾಟಿ ಗುಣ ಅವರಿಗೆ ನಂಟಾಗಿತ್ತು. ಶೂಟಿಂಗ್‌ಗೂ, ಮನೆಗೂ ಒಂದೇ ರೀತಿಯ ಸರಳ ಉಡುಪು. ಯಾರನ್ನೇ ಭೇಟಿ ಮಾಡಿದರೂ ಗೌರವಪೂರ್ಣ ಮಾತು. ಹಿರಿಯ- ಕಿರಿಯರ ನಡುವಿನ ಅಂತರವಿಲ್ಲದ ಸೌಮ್ಯ ಸ್ವಭಾವ. ನೈಸರ್ಗಿಕ ಜೀವನಶೈಲಿ, ನಿಯಮ-ಶಿಷ್ಟಾಚಾರ, ಅತಿಯಾದ ಪ್ರದರ್ಶನಕ್ಕೆ ದೂರ.
ಅವರು ಹೇಳುತ್ತಿದ್ದ ಒಂದು ಮಾತು ಅವರ ವ್ಯಕ್ತಿತ್ವವನ್ನು ಹೇಳುವುದು,“ಜನರ ಪ್ರೀತಿ ನನ್ನ ಜೀವಾಳ.”
ಸಿನಿಮಾ ಲೋಕದ ‘ಅಣ್ಣಾವ್ರು’ ತಮ್ಮ ನಡೆ-ನೀಡಿನಿಂದ ಕನ್ನಡಿಗರಿಗೆ ಒಬ್ಬ ಕಲಾವಿದ ಹೇಗೆ ಒಬ್ಬ ಮಾನವ ಆಗಿರಬೇಕು ಎಂಬುದಕ್ಕೆ ನಿಜವಾದ ಮಾದರಿ.
key words: Dr. Rajkumar, a great actor of Kannada, A rare trait, Visiting card, bangalore

SUMMARY:
Dr. Rajkumar, a great actor of Kannada and a great man of integrity, has a great quality in his life. A rare trait of such a great actor has now caught our attention.







