Friday, October 16, 2026

Dasara Wishes

Dasara Sports Meet DasraWishes_JK DasraWishes JK
Happy Dasara
Home Front Page ಬಿಜೆಪಿ ಅಭ‍್ಯರ್ಥಿ ಡಾ.ಕೆ.ಸುಧಾಕರ್ ಗೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ- ಸಿಎಂ ಸಿದ್ದರಾಮಯ್ಯ

ಬಿಜೆಪಿ ಅಭ‍್ಯರ್ಥಿ ಡಾ.ಕೆ.ಸುಧಾಕರ್ ಗೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ- ಸಿಎಂ ಸಿದ್ದರಾಮಯ್ಯ

ಚಿಕ್ಕಬಳ್ಳಾಪುರ, ಏಪ್ರಿಲ್,18,2024 (www.justkannada.in): ಕೋವಿಡ್ ನಲ್ಲಿ ನಡೆದ  ಹಗರಣದ ಸಾಕ್ಷ್ಯಾಧಾರ ಸಿಕ್ಕಿದೆ. ಹೀಗಾಗಿ ಬಿಜೆಪಿ ಅಭ್ಯರ್ಥಿ ಹಾಗೂ  ಮಾಜಿ ಸಚಿವ ಡಾ. ಕೆ ಸುಧಾಕರ್ಜೈಲಿಗೆ ಹೋಗುವ ಸ್ಥಿತಿ ಬರಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಹೇಳಿದರು.

ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ಪರವಾಗಿ ಪ್ರಚಾರ ನಡೆಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ,   ‘ಸುಧಾಕರ್ ಆರೋಗ್ಯ ಸಚಿವನಾಗಿದ್ದಾಗ ರಾಜ್ಯದಲ್ಲಿ ಬಹಳಷ್ಟು ಭ್ರಷ್ಟಾಚಾರ ಮಾಡಿದ್ದಾರೆ. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಹಗರಣ ಆಗಿದೆ.  ದುಬಾರಿ ಬೆಲೆಗೆ  ಕೋವಿಡ್ ವೈದ್ಯಕೀಯ ಸಲಕರಣೆ ಖರೀದಿ ಮಾಡಿದ್ದಾರೆ.  ಕೋವಿಡ್ ಹಗರಣದ ಸಾಕ್ಷಾಧಾರ ಸಿಕ್ಕಿದೆ. ಡಾ.ಕೆ. ಸುಧಾಕರ್ ಜೈಲಿಗೆ ಹೋಗ್ತಾರೆ. ಸುಧಾಕರ್ ಹೆಸರು ಹೇಳಲು ನಾಚಿಕೆ ಆಗುತ್ತೆ. ಸುಧಾಕರ್ ಗೆ ಮತ ನೀಡಬೇಡಿ ಎಂದರು.

ಭ್ರಷ್ಟರು ಸಂಸತ್ ​ಗೆ ಹೋದರೆ ಭ್ರಷ್ಟಾಚಾರ ಮತ್ತಷ್ಟು ಹೆಚ್ಚಾಗುತ್ತದೆ. ಅವರ ಕುರಿತ ಹಗರಣದ ತನಿಖೆಗೆ ಈಗಾಗಲೇ ಆಯೋಗ ರಚಿಸಿದ್ದೇವೆ. ಮಾಹಿತಿ ಪ್ರಕಾರ ಎಲ್ಲಾ ದಾಖಲೆಗಳು ಅವರ ವಿರುದ್ಧವೇ ಇದೆ. ಹಾಗಾಗಿ ಸುಧಾಕರ್​ ನೂರಕ್ಕೆ ನೂರಷ್ಟು ಜೈಲಿಗೆ ಹೋಗುತ್ತಾರೆ ಎಂದು  ಸಿಎ ಸಿದ್ದರಾಮಯ್ಯ ಕಿಡಿಕಾರಿದರು.ಬಿಜೆಪಿ ಅಭ‍್ಯರ್ಥಿ ಡಾ.ಕೆ.ಸುಧಾಕರ್ ಗೆ ಜೈಲಿಗೆ ಹೋಗುವ ಸ್ಥಿತಿ ಬರಲಿದೆ- ಸಿಎಂ ...

ರಾಜ್ಯದಲ್ಲಿ ಬರ ಬಂದಾಗ ಪ್ರಧಾನಿ ಮೋದಿ ಬರಲ್ಲಿಲ್ಲ. ಆದರೆ ಇದೀಗ ಏ.20ರಂದು  ಸುಧಾಕರ್ ಪರ ಪ್ರಚಾರ ಮಾಡಲು ಮೋದಿ ಬರುತ್ತಿದ್ದಾರೆ. ಈ ಭಾರಿಯ ಲೋಕಸಭೆ ಚುನಾವಣೆಯಲ್ಲೂ ನೀವು ಸುಧಾಕರ್​ ನನ್ನು ಸೋಲಿಸಿ, ರಕ್ಷಾ ರಾಮಯ್ಯ ಕುಟುಂಬ ಪ್ರಾಮಾಣಿಕರು ರಕ್ಷಾ ರಾಮಯ್ಯಗೆ ಮತ ಹಾಕಿ ಎಂದು ಸಿದ್ದರಾಮಯ್ಯ ಕರೆ ನೀಡಿದರು.

Key words: Dr. K. Sudhakar,will, jail, CM Siddaramaiah