Friday, August 14, 2026

BDA Apartments

Home Front Page ನಮ್ಮದು ಡಬಲ್ ಇಂಜಿನ್ ಸರ್ಕಾರ: ಅವರದ್ದು ಟ್ರಬಲ್ ಇಂಜಿನ್ ಸರ್ಕಾರ- ಕಾಂಗ್ರೆಸ್ ವಿರುದ್ಧ ಜೆ.ಪಿ ನಡ್ಡಾ...

ನಮ್ಮದು ಡಬಲ್ ಇಂಜಿನ್ ಸರ್ಕಾರ: ಅವರದ್ದು ಟ್ರಬಲ್ ಇಂಜಿನ್ ಸರ್ಕಾರ- ಕಾಂಗ್ರೆಸ್ ವಿರುದ್ಧ ಜೆ.ಪಿ ನಡ್ಡಾ ವಾಗ್ದಾಳಿ.

ಬೆಂಗಳೂರು,ಮೇ,1,2023(www.justkannada.in): ಸಿದ್ದರಾಮಯ್ಯ ಅವಧಿಯಲ್ಲಿ  ರಿವರ್ಸ್ ಗೇರ್ ಸರ್ಕಾರ ಇತ್ತು. ಗಲಭೆ ಗಲಾಟೆಗೆ ಕುಮ್ಮಕ್ಕು ನೀಡುತ್ತಿದ್ದರು. ಆದರೆ ನಮ್ಮದು ಡಬಲ್ ಇಂಜಿನ್ ಸರ್ಕಾರ.  ಅವರದ್ದು ಟ್ರಬಲ್ ಇಂಜಿನ್ ಸರ್ಕಾರ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ ನಡ್ಡಾ ವಾಗ್ದಾಳಿ ನಡೆಸಿದರು.

ಬಿಜೆಪಿ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಜೆ.ಪಿ ನಡ್ಡಾ,  ಪ್ರತಿ  ಭರವಸೆಯನ್ನೂ ಎಸಿ ರೂಮ್ ನಲ್ಲಿ ಕುಳಿತು ಮಾಡಿಲ್ಲ . ಸಾವಿರ ಮನೆಗಳು ವಿವಿದ ವಲಯಗಳಲ್ಲಿ ಮಾಹಿತಿ ಅಭಿಪ್ರಾಯ ಸಂಗ್ರಹ ಮಾಡಿದ್ದೇವೆ.  ಬಿಜೆಪಿ ಸರ್ಕಾರ ಅವಕಾಶವನ್ನ ಸದ್ಬಳಕೆ ಮಾಡಿಕೊಂಡಿದೆ ಎಂದರು.

ಸಿದ್ದರಾಮಯ್ಯ ಅವಧಿಯಲ್ಲಿ  ರಿವರ್ಸ್ ಗೇರ್ ಸರ್ಕಾರ ಇತ್ತು. ಗಲಭೆಕೋರರಿಗೆ ಗಲಾಟೆಗೆ ಕುಮ್ಮಕ್ಕು ನೀಡುತ್ತಿದ್ದರು. ಗಲಭೆ ಹತ್ಯೆಯಿಂದ ಕರ್ನಾಟಕ ಕರಾಳ ದಿನವಾಗಿತ್ತು.  ನಮ್ಮದು ಅಭಿವೃದ್ದಿ ಸರ್ಕಾರ ಅವರದ್ದು ರಿವರ್ಸ್ ಗೇರ್ ಸರ್ಕಾರ. ಕಾಂಗ್ರೆಸ್ ಅವಧಿಯಲ್ಲಿ ಪಿಎಫ್ ಐ ಮೇಲಿದ್ದ 175 ಕೇಸ್ ವಾಪಸ್  ಪಡೆದರು. ಆದರೆ ಬಿಜೆಪಿ  ಅಧಿಕಾರಕ್ಕೆ ಬಂದ ಮೇಲೆ ಪಿಎಫ್ ಐ ಬ್ಯಾನ್ ಮಾಡಿದೆ. ಒಕ್ಕಲಿಗ ಲಿಂಗಾಯತ ಮೀಸಲಾತಿ ನೀಡಿದ್ದೇವೆ . ಎಸ್ ಸಿ,  ಎಸ್.ಟಿ ಮೀಸಲಾತಿ ಹೆಚ್ಚಿಸಿದ್ದೇವೆ.  ಧರ್ಮದ ಆಧಾರದಲ್ಲಿ  ಮೀಸಲಾತಿ ನೀಡಲು ಆಗಲ್ಲ.  ಶೀಘ್ರವೇ ಅದೆಲ್ಲಾ ಇತ್ಯಾರ್ಥವಾಗಿ ಮೀಸಲಾತಿ ಸಿಗಲಿದೆ ಎಂದು ಜೆಪಿ ನಡ್ಡಾ ಹೇಳಿದರು.

Key words: double- engine -government – JP Nadda – against -Congress.