ವರ್ಷಕ್ಕೊಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಓಪನ್.

ಹಾಸನ,ಅಕ್ಟೋಬರ್,13,2022(www.justkannada.in):  ವರ್ಷಕ್ಕೆ ಒಮ್ಮೆ ಮಾತ್ರ ದರ್ಶನ ನೀಡುವ ಹಾಸನಾಂಬೆ ದೇಗುಲದ ಬಾಗಿಲು ಇಂದು ತೆರಯಲಾಗಿದ್ದು ಅಕ್ಟೋಬರ್ 27ರವರೆಗೆ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರಲಿದೆ.

ಸಚಿವ ಗೋಪಾಲಯ್ಯ ಮತ್ತು ಅಧಿಕಾರಿಗಳ ಸಮ್ಮುಖದಲ್ಲಿ ಹಾಸನಾಂಬೆ ದೇಗುಲದ ಬಾಗಿಲು  ತೆರೆಯಲಾಯಿತು. ಇಂದು ಬಾಳೆ ಕಂಬ ಕಡಿದ ಬಳಿಕ ದೇವಿಯ ಬಾಗಿಲು ತೆರೆಯಲಾಗಿದೆ . ಆ ಮೂಲಕ ದರ್ಶನ ಶುರುವಾಗಿದ್ದು ಇಂದು ಮಾತ್ರ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶವಿರುವುದಿಲ್ಲ. ನಾಳೆಯಿಂದ  ಭಕ್ತರಿಗೆ ದರ್ಶನ ಸಿಗಲಿದೆ.

ಹಾಸನಾಂಬೆ ದೇವಸ್ಥಾನಕ್ಕೆ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಹಾಗೂ ಸಾವಿರಾರು ಭಕ್ತರು ದರ್ಶನಕ್ಕಾಗಿ ಕಾತುರದಿಂದ ಕಾಯುತ್ತಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದೆರಡು ವರ್ಷದಿಂದ ಹಾಸನಾಂಬೆ ಉತ್ಸವದ ವೈಭವ ತಗ್ಗಿತ್ತು. ಆದರೆ, ಈ  ಬಾರಿ ಅದ್ಧೂರಿ ಉತ್ಸವಕ್ಕೆ ಜಿಲ್ಲಾಡಳಿತ ತಯಾರಾಗಿದೆ. ಲಕ್ಷಾಂತರ ಭಕ್ತರು ದೇವಿಯ ದರ್ಶನಕ್ಕೆ ಬರುವ ನಿರೀಕ್ಷೆಯಿದ್ದು, ಈಗಾಗಲೇ ಸಕಲ ಸಿದ್ಧತೆ  ಮಾಡಲಾಗಿದೆ.

Key words:  door -Hassanambe temple- open- devotees