Sunday, September 20, 2026

BDA Apartments

Home Front Page JN.1 ಸೋಂಕಿನ ಬಗ್ಗೆ ಗಾಬರಿ ಬೇಡ: ಹೊಸ ವರ್ಷಾಚರಣೆ, ಸಭೆ ಸಮಾರಂಭಗಳಿಗೆ ನಿರ್ಬಂಧ ಇಲ್ಲ- ಸಚಿವ...

JN.1 ಸೋಂಕಿನ ಬಗ್ಗೆ ಗಾಬರಿ ಬೇಡ: ಹೊಸ ವರ್ಷಾಚರಣೆ, ಸಭೆ ಸಮಾರಂಭಗಳಿಗೆ ನಿರ್ಬಂಧ ಇಲ್ಲ- ಸಚಿವ ದಿನೇಶ್ ಗುಂಡೂರಾವ್.

ಬೆಂಗಳೂರು,ಡಿಸೆಂಬರ್,25,2023(www.justkannada.in): ರಾಜ್ಯದಲ್ಲಿ ಈಗಿರುವ ಕೋವಿಡ್ ಮಾರ್ಗಸೂಚಿಯೇ ಮುಂದುವರೆಯಲಿದ್ದು, ಹೊಸ ವರ್ಷಾಚರಣೆ, ಸಭೆ ಸಮಾರಂಭಗಳಿಗೆ ಯಾವುದೇ ನಿರ್ಬಂಧ ಇಲ್ಲ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ದಿನೇಶ್ ಗುಂಡೂರಾವ್,  ಒಮಿಕ್ರಾನ್ ಉಪತಳಿ ಜೆಎನ್.1 ಬಂದಿರುವ ಬಗ್ಗೆ ಮಾಹಿತಿ ಇತ್ತು. ಒಮಿಕ್ರಾನ್ JN.1 ಬಂದ ತಕ್ಷಣ ಯಾರು ಗಾಬರಿಯಾಗುವುದು ಬೇಡ. ರಾಜ್ಯದಲ್ಲಿ ಈಗಾಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ  ಎಂದರು.JN.1 ಸೋಂಕಿನ ಬಗ್ಗೆ ಗಾಬರಿ ಬೇಡ dinesh gundurao

ಆರೋಗ್ಯ ಇಲಾಖೆ ಅಧಿಕಾರಿಗಳು ಬಿಬಿಎಂಪಿ ಜೊತೆ ಸಭೆ ನಡೆಸಿದ್ದೇವೆ.  ಹೊಸ ವರ್ಷಾಸರಣೆ ಸೇರಿದಂತೆ ಸಭೆ ಸಮಾರಂಭಗಳಿಗೆ ನಿರ್ಬಂಧ ವಿಲ್ಲ. ರಾಜ್ಯದಲ್ಲಿ ಈಗಿರುವ ಮಾರ್ಗಸೂಚಿಯೇ ಮುಂದುವರೆಯಲಿದೆ. ಏನಾದರೂ ಬದಲಾವಣೆ ತಂದರೆ ಮಾಹಿತಿ ನೀಡುತ್ತೇವೆ ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.

Key words: Don’t -panic -about -JN.1 – Minister -Dinesh Gundurao.