Friday, August 7, 2026

BDA Apartments

Home Cinema ನಾನು ಯಾವುದೇ ತಪ್ಪು ಮಾಡಿಲ್ಲ: ಸಿಸಿಬಿ ವಿಚಾರಣೆಗೆ ಸಹಕರಿಸುವೆ – ಅಕುಲ್ ಬಾಲಾಜಿ

ನಾನು ಯಾವುದೇ ತಪ್ಪು ಮಾಡಿಲ್ಲ: ಸಿಸಿಬಿ ವಿಚಾರಣೆಗೆ ಸಹಕರಿಸುವೆ – ಅಕುಲ್ ಬಾಲಾಜಿ

ಬೆಂಗಳೂರು,ಸೆಪ್ಟೆಂಬರ್,19,2020(www.justkannada.in) : ಪ್ರತೀಕ್ ಶೆಟ್ಟಿ ಯಾರೆಂಬುದು ಗೊತ್ತಿಲ್ಲ. ವೈಭವ್ ಅವರು ಹಾಯ್ ಬಾಯ್ ಫ್ರೆಂಡ್ ಅಷ್ಟೇ. ನಾನು ಯಾವುದೇ ತಪ್ಪು ಮಾಡಿಲ್ಲ. ಸಿಸಿಬಿ ಅವರ ವಿಚಾರಣೆಗೆ ಸಹಕರಿಸುತ್ತೇನೆ ಎಂದು ನಟ, ನಿರೂಪಕ ಅಕುಲ್ ಬಾಲಾಜಿ ಹೇಳಿದರು.

jk-logo-justkannada-logo

ಡ್ರಗ್ಸ್ ಮಾಫಿಯಾ ಸಂಬಂಧಿಸಿದಂತೆ ಸಿಸಿಬಿ ಪೊಲೀಸ್ ನೋಟಿಸ್ ನೀಡಿದ ಹಿನ್ನೆಲೆಯಲ್ಲಿ ಶನಿವಾರ ಸಿಸಿಬಿ  ವಿಚಾರಣೆಗೆ ಹಾಜರಾದ ಸಂದರ್ಭ ಮಾತನಾಡಿದ ಅಕುಲ್ ಬಾಲಾಜಿ, ನಾನು ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡಿಲ್ಲ ಎಂದರೆ ಹೆದರಬೇಡ ಎಂದು ಹೇಳಿದ್ದು, ಸಿಸಿಬಿ ವಿಚಾರಣೆಗೆ ಸಹಕಾರ ನೀಡುವೆ ಎಂದು ತಿಳಿಸಿದರು.

done-nothing-wrong-Supporting-CCB-inquiry-Akul Balaji

ನಟ ಸಂತೋಷ್ ಆರ್ಯನ್, ಆರ್.ವಿ.ಯುವರಾಜ್ ಅವರು ಸಿಸಿಬಿ ವಿಚಾರಣೆಗೆ ಹಾಜರಾಗಿದ್ದು, ಮೂವರನ್ನು ಪ್ರತ್ಯೇಕವಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

key words :done-nothing-wrong-Supporting-CCB-inquiry-Akul Balaji