ರಂಜಾನ್ ಉಪವಾಸದ ಪ್ರಾರ್ಥನೆಗೆ ತೆರಳುತ್ತಿದ್ದ ಬಾಲಕನ ಮೇಲೆ ನಾಯಿಗಳಿಂದ ದಾಳಿ: ಪ್ರಾಣ ಉಳಿಸಿ ಮಾನವೀಯತೆ  ಮೆರೆದ ಪೊಲೀಸ್.

ಕೋಲಾರ,ಏಪ್ರಿಲ್,22,2023(www.justkannada.in):  ರಂಜಾನ್ ಕೊನೆ‌ ದಿನದ ಉಪವಾಸದ ಪ್ರಾರ್ಥನೆಗೆ ಮಸೀದಿಗೆ ತೆರಳುತಿದ್ದ ಬಾಲಕನ ಮೇಲೆ ನಾಯಿಗಳು ಏಕಾಏಕಿ  ದಾಳಿ ನಡೆಸಿ ಗಾಯಗೊಳಿಸಿದ್ದು,  ನಾಯಿಗಳ‌ ಕೈಗೆ ಸಿಕ್ಕಿ ಪ್ರಾಣ ಉಳಿಸಿಕೊಳ್ಳಲು ಪರದಾಡುತ್ತಿದ್ದ ಬಾಲಕನ ಪ್ರಾಣವನ್ನ  ಪೊಲೀಸ್  ಕಾನ್ಸ್ ಟೇಬಲ್ ವೊಬ್ಬರು ಉಳಿಸಿದ ಘಟನೆ ನಡೆದಿದೆ.

ಹೌದು ಇಂದು ಮುಂಜಾನೆ ಕೋಲಾರದ ರಹಮತ್ ನಗರದ 9 ವರ್ಷದ ಬಾಲಕ ಜಾಫರ್ ರಂಜಾನ್ ಕೊನೆಯ ದಿನದ ಜಾಗರಣೆಯನ್ನು ಮಸೀದಿಯಲ್ಲಿ ಮುಗಿಸಿದ್ದ.ಮನೆಗೆ ಬಂದು ಮತ್ತೆ ಮನೆಯಿಂದ ಪ್ರಾರ್ಥನೆಗಾಗಿ ಮಸೀದಿಗೆ ತೆರಳುತ್ತಿದ್ದ.ಈ ವೇಳೆ ನಾಯಿಗಳು ಮೇಲೆರೆಗಿ ಮನಸ್ಸು ಇಚ್ಛೆ ಕಚ್ಚಿ ಗಾಯಗೊಳಿಸಿದೆ. ನಾಯಿಗಳಿಂದ ಬಿಡಿಸಿಕೊಳ್ಳಲಾಗದೆ ಪ್ರಾಣವೇ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಬಾಲಕ‌ ಪರದಾಡುತ್ತಿದ್ದಂತಹ ಸಂದರ್ಭದಲ್ಲಿ ರಾತ್ರಿ ಗಸ್ತಿನಲ್ಲಿದ್ದ ಪೊಲೀಸ್ ಕಾನ್ಸ್ ಟೇಬಲ್ ಬಾಲಕನ ಚಿರಾಟ ಕಂಡು ಕೂಡಲೇ ರಕ್ಷಣೆಗೆ ದಾವಿಸಿ ನಾಯಿಗಳಿಂದ‌ ಬಾಲಕನನ್ನು ರಕ್ಷಣೆ ಮಾಡಿ ಕೂಡಲೇ ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಮಾನವೀಯತೆ ಮೆರೆದಿದ್ದಾರೆ.

ಇನ್ನು ಕೋಲಾರ ನಗರದಲ್ಲಿ ಇತ್ತೀಚೆಗೆ ಬೀದಿನಾಯಿಗಳ ಹಾವಳಿ ಹೆಚ್ಚಾಗಿ ಹೋಗಿದ್ದು,  ಬೀದಿ ಬೀದಿಗಳಲ್ಲಿ ಜನರು ಓಡಾಡಲು ಸಾಧ್ಯವಾಗದಷ್ಟರ ಮಟ್ಟಿಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಹಗಲಲ್ಲಾಗಲೀ ರಾತ್ರಿಯಲ್ಲಾಗಲೀ ರಸ್ತೆಯಲ್ಲಿ ಜನರಿಗಿಂತ ನಾಯಿಗಳ ಅಬ್ಬರವೇ ಜೋರಾಗಿರುತ್ತದೆ. ರಸ್ತೆಯಲ್ಲಿ ಜನರು ಓಡಾಡೋದು ಕಷ್ಟ ಆತಂಕದಲ್ಲೇ ಓಡಾಡುವ ಸ್ಥಿತಿ ಇದೆ. ಮಕ್ಕಳು ಶಾಲೆ ಹೋಗುವಾಗ, ಮಹಿಳೆಯರು ಕೆಲಸಕ್ಕೆ ಹೋಗುವಾಗ ರಕ್ಕಸ ನಾಯಿಗಳು ಜನರ ಮೇಲೆರಗುತ್ತವೆ, ಬೀದಿಯಲ್ಲೇ ಕಚ್ಚಾಡಿಕೊಂಡು ಜನರ ಮೇಲೆ ಬಂದು ಬೀಳುತ್ತಿವೆ ಕಳೆದ ಒಂದು ವರ್ಷದಿಂದ ಇದೇ ಪರಿಸ್ಥಿತಿ ಇದೆ.ಇನ್ನು ಹೆಚ್ಚಾಗಿ ಮಟನ್​ ಚಿಕನ್​ ಅಂಗಡಿಗಳು, ನಾನ್​ ವೆಜ್​ ಹೋಟೆಲ್​ ಗಳ ಬಳಿಯಂತೂ ನೂರಾರು ನಾಯಿಗಳು ಸದಾ ಬಿಡಾರ ಹೂಡಿರುತ್ತವೆ. ಇಂಥ ನಾಯಿಗಳಿಂದ ಪ್ರತಿನಿತ್ಯ ಒಬ್ಬರಲ್ಲಾ ಒಬ್ಬರು ನಾಯಿಯಿಂದ ಕಚ್ಚಿಸಿಕೊಂಡು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಕಳೆದ 6 ತಿಂಗಳಲ್ಲಿ ನಾಯಿ ಕಡಿತದಿಂದ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದವರ ಸಂಖ್ಯೆ 93 ಕ್ಕೆ ಏರಿದೆ. ಇದು ಇಂದಿಗೂ ಕೂಡಾ ಮುಂದುವರದಿದೆ.ಬೀದಿನಾಯಿಗಳು ಪುಟ್ಟ ಬಾಲಕ ಜಾಫರ್ ಮೇಲೆ ದಾಳಿ ಮೈ ಎಲ್ಲಾ ಕಚ್ಚಿ ಗಾಯಗೊಳಿಸಿದೆ.

ಕೋಲಾರ ನಗರದಲ್ಲಿ   ಮಕ್ಕಳು, ವೃದ್ದರ ಮೇಲೆ ಎರಗಿ  ನಾಯಿಗಳು ಕಚ್ಚಿಗಾಯಗೊಳಿಸುತ್ತಿದ್ದು, ನಗರಸಭೆ ಮಾತ್ರ ತನಗೆ ಇದು ಸಂಭಂದವೇ ಇಲ್ಲ ಎಂಬಂತೆ ವರ್ತಿಸುತ್ತಿದೆ. ಕೂಡಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಬೇಕಿದೆ ಇಲ್ಲವಾದಲ್ಲಿ ರಸ್ತೆಯಲ್ಲಿ ಜನರಿಗಿಂತ ನಾಯಿಗಳೇ ಹೆಚ್ಚಾಗಿ ಜನರು ಮನೆಯಲ್ಲಿ ಬಾಗಿಲು ಹಾಕಿಕೊಂಡು ಕೂರಬೇಕಾದ ಸ್ಥಿತಿ ಎದುರಾಗುತ್ತದೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

Key words: dogs – attacked – boy -kolar