ಸಿಎಂ ಬಸವರಾಜ ಬೊಮಾಯಿ ರಾಜೀನಾಮೆಗೆ ಡಿ.ಕೆ ಶಿವಕುಮಾರ್ ಆಗ್ರಹ.

ರಾಮನಗರ,ಮಾರ್ಚ್,7,2022(www.justkannada.in):   ಮೇಕೆದಾಟು ಜಾರಿ ವಿಚಾರದಲ್ಲಿ ನಾವು ಏನು ಮಾಡಲು ಆಗುವುದಿಲ್ಲ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.  ಅವರ ಹೇಳಿಕೆ ಬಗ್ಗೆ ಸಿಎಂ ಬೊಮ್ಮಾಯಿ ಮೌನವಾಗಿದ್ದಾರೆ. ಈ ಬಗ್ಗೆ ಅವರು ಉತ್ತರ ನೀಡಬೇಕು ಇಲ್ಲದಿದ್ದರೇ ಸಿಎಂ ಬೊಮ್ಮಾಯಿ ರಾಜೀನಾಮೆ ನೀಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆಗ್ರಹಿಸಿದರು.

ಈ ಕುರಿತು ಇಂದು ಮಾತನಾಡಿದ ಡಿ.ಕೆ ಶಿವಕುಮಾರ್,  ಕೇಂದ್ರ ಮಂತ್ರಿ ನನ್ನ ಕೈಯಲ್ಲಿ ಏನು ಮಾಡಲು ಆಗುವುದಿಲ್ಲ ಎಂದರೆ ಅರ್ಥ ಏನು. ಸಿಎಂ ಸ್ಥಾನಕ್ಕಾಗಿ ಬೊಮ್ಮಾಯಿ‌ ಸುಮ್ಮನೆ ಕೂರಬಾರದಿತ್ತು. ಮೇಕೆದಾಟು ಯೋಜನೆಗೆ ಸಂಪೂರ್ಣ ಜವಾಬ್ದಾರಿ ಕೇಂದ್ರ ಸರ್ಕಾರದ್ದು. ಹೀಗಾಗಿ ಕೂಡಲೇ ಎನ್‌ಓಸಿ ಕೊಡಿಸಬೇಕು ಎಂದು ಆಗ್ರಹಿಸಿದರು.

ಕೇಂದ್ರ ಸಚಿವರ ಮಾತು ಆಶ್ವರ್ಯ ತರುತ್ತದೆ. ಅಧಿಕಾರ ಅವರತ್ತಿರ ಇದೆ. ಚರ್ಚೆ ಮಾಡುವುದಾಗಿದ್ದರೆ ನಾವು ಯಾಕೆ ಅವರ ಬಳಿ ಹೋಗಬೇಕಿತ್ತು. ಕುಡಿಯುವ ನೀರಿನ ಯೋಜನೆಗೆ ಅನುಮೋದನೆ ಕೊಡಬೇಕಾಗಿದ್ದು ಕೇಂದ್ರ ಸರ್ಕಾರ. ರಾಜ್ಯದ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾಡುತ್ತಿವೆ ಎಂದು ಡಿಕೆ ಶಿವಕುಮಾರ್ ಕಿಡಿಕಾರಿದರು.

Key words: DK Shivakumar- resignation -CM -Basavaraja Bommai