ಡಿಕೆ ಶಿವಕುಮಾರ್ ಗೆ ಹುಂಬತನವಿದೆ: ಅವರು ನನಗಿಂತ ಹೆಚ್ಚು ಕೆಲಸ ಮಾಡುವ ವ್ಯಕ್ತಿ- ಮಾಜಿ ಸಚಿವ ವಿ.ಸೋಮಣ್ಣ.

ಬೆಂಗಳೂರು,ಆಗಸ್ಟ್,12,2023(www.justkannada.in): ಡಿಕೆ ಶಿವಕುಮಾರ್ ಗೆ ಹುಂಬತನವಿದೆ. ಡಿಕೆಶಿ ಯಾರನ್ನೂ ಟಾರ್ಗೆಟ್ ಮಾಡುವ ವ್ಯಕ್ತಿ ಅಲ್ಲ.  ಅವರು ನನಗಿಂತ ಹೆಚ್ಚು ಕೆಲಸ ಮಾಡುವ ವ್ಯಕ್ತಿ ಎಂದು ಡಿಕೆ ಶಿವಕುಮಾರ್ ಪರ ಮಾಜಿ ಸಚಿವ ವಿ.ಸೋಮಣ್ಣ ಬ್ಯಾಟ್ ಬೀಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ವಿ.ಸೋಮಣ್ಣ, ಗುತ್ತಿಗೆದಾರರ ಬಿಲ್ ಹಿಡಿದುಕೊಳ್ಳುವುದು ಬೇಡ. ಡಿ.ಕೆ.ಶಿವಕುಮಾರ್​​ ನನಗೆ ಬೇಕಾದಂತಹ ವ್ಯಕ್ತಿ. ಹಿಂದೆ ಡಿ.ಕೆ.ಶಿವಕುಮಾರ್ ಸಿಎಂ ಆಗಲಿ ಅಂತಾ ನಾನೇ ಹೇಳಿದ್ದೆ. ಆದರೆ ರಾಜಕೀಯ ಬೇರೆ, ಡಿಕೆ ಶಿವಕುಮಾರ್ ರನ್ನು ಬೇರೆಯವರಿಗೆ ಹೋಲಿಸಲ್ಲ. ಗುತ್ತಿಗೆದಾರರ ಕಾಮಗಾರಿ ಬಿಲ್​​​​​ ತಡೆಹಿಡಿಯುವುದು ಬೇಡ ಎಂದರು.

ಕಾಮಗಾರಿಗಳ ತನಿಖೆ ಬಳಿಕ ಬಿಲ್ ಪಾವತಿ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ವಿ.ಸೋಮಣ್ಣ,  ನನ್ನ ಕ್ಷೇತ್ರದಲ್ಲಿ ನಿಮ್ಮ ಶಾಸಕರೇ ಇದ್ದಾರೆ ತನಿಖೆ ನೆಪದಲ್ಲಿ ಯಾರಿಗೂ ತೊಂದರೆಕೊಡಬೇಡಿ.  ಎಲ್ಲಾ ಗುತ್ತಿದಾರರು ಕೆಟ್ಟವರು ಅಂದ್ರೆ ಹೇಗೆ. ಎಲ್ಲಾ ಗುತ್ತಿಗೆದಾರರು ಬಿಜೆಪಿಯವರು ಎಂದ್ರೆ ಹೇಗೆ..? ತನಿಖೆಗೆ ನನ್ನ ತಕರಾರು ಇಲ್ಲ ನನ್ನ ಕ್ಷೇತ್ರದಿಂದಲೇ ತನಿಖೆ ಶುರುಮಾಡಿ ಎಂದರು.

Key words: DK Shivakumar – proud-works-Former minister -V. Somanna.