Tuesday, September 15, 2026

BDA Apartments

ಹಿಜಾಬ್ ವಿವಾದದಿಂದ ಅಂತರ ಕಾಯ್ದುಕೊಳ್ಳುವಂತೆ ಡಿ.ಕೆ ಶಿವಕುಮಾರ್ ಸೂಚನೆ BDA JK_Adv...
Home Front Page ಹಿಜಾಬ್ ವಿವಾದದಿಂದ ಅಂತರ ಕಾಯ್ದುಕೊಳ್ಳುವಂತೆ ಡಿ.ಕೆ ಶಿವಕುಮಾರ್ ಸೂಚನೆ.

ಹಿಜಾಬ್ ವಿವಾದದಿಂದ ಅಂತರ ಕಾಯ್ದುಕೊಳ್ಳುವಂತೆ ಡಿ.ಕೆ ಶಿವಕುಮಾರ್ ಸೂಚನೆ.

ಬೆಂಗಳೂರು,ಫೆಬ್ರವರಿ,12,2022(www.justkannada.in):  ರಾಜ್ಯದಲ್ಲಿ ಶುರವಾದ ಹಿಜಾಬ್ ವಿವಾದ ಇದೀಗ ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದಲ್ಲೂ ಚರ್ಚೆಗೆ ಗ್ರಾಸವಾಗಿದ್ದು ಈ ಮಧ್ಯೆ ಹಿಜಾಬ್ ವಿವಾದದಿಂದ ಅಂತರ ಕಾಯ್ದುಕೊಳ್ಳುವಂತೆ ಪಕ್ಷದ ಮುಖಂಡರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಹೌದು ಹಿಜಾಬ್ ವಿವಾದ ಬಗ್ಗೆ ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು. ಹಾಗೆಯೇ ಪಕ್ಷದ ವೇದಿಕೆಯಲ್ಲಿ ವಿದ್ಯಾರ್ಥಿನಿ ಮುಸ್ಕಾನ್  ಬೆಂಬಲಿಸದಂತೆ  ಡಿಕೆ ಶಿವಕುಮಾರ್ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಪಕ್ಷದ ಬ್ಯಾನರ್ ಮೂಲಕ ಯಾರೂ ಸಹಾಯ ಮಾಡಬೇಡಿ. ಬೇಕಿದ್ದರೇ ವೈಕ್ತಕವಾಗಿ ಸಹಾಯ ಮಾಡಬಹುದು ವಿವಾದ ಬಗ್ಗೆ ಎಲ್ಲರೂ ಅಂತರ ಕಾಯ್ದುಕೊಳ್ಳಬೇಕು ಎಂದು ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕಕ್ಕೆ ಸೂಚನೆ ನೀಡಿದ್ದಾರೆ.

Key words:  DK Shivakumar -instructs – hijab -controversy