Thursday, August 13, 2026

BDA Apartments

Home Front Page ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು KMF, ಎರಡು ಅಮುಲ್ ಉತ್ಪನ್ನ ಮಳಿಗೆಗೆ ಅನುಮತಿ- ಡಿಕೆ ಶಿವಕುಮಾರ್

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು KMF, ಎರಡು ಅಮುಲ್ ಉತ್ಪನ್ನ ಮಳಿಗೆಗೆ ಅನುಮತಿ- ಡಿಕೆ ಶಿವಕುಮಾರ್

ಬೆಂಗಳೂರು, ಜೂನ್, 18,2025 (www.justkannada.in):  ಬೆಂಗಳೂರಿನ ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ ಮೂಲದ ಅಮುಲ್ ಉತ್ಪನ್ನ ಮಳಿಗೆಗಳನ್ನು  ತೆರೆಯಲು ಅನುಮತಿ ನೀಡಿರುವುದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದ್ದು ಈ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ಕೆಎಂಎಫ್‌ ಗೆ ಟೆಂಡರ್ ಕೊಟ್ಟಿದ್ದೇವೆ. ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್‌ಗೆ ಅವಕಾಶ ಕೊಡಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ನಮ್ಮದೇ ರಾಜ್ಯದ ಕೆಎಂಎಫ್ ​ಗೆ ಅನುಮತಿ ಕೊಡಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಮಳಿಗೆಗಳನ್ನು ತೆರೆಯುವುದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಅದರ ಅಡಿಯಲ್ಲಿ ಅಮುಲ್​ ಗೆ ಅವಕಾಶ ಕೊಡಲಾಗಿದೆ ಎಂದು  ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೆಎಂಎಫ್ ನಂದಿನಿ ಬಿಟ್ಟು ಬೇರೆ ರಾಜ್ಯದ ಅಮುಲ್ ಮಳಿಗೆಗಳಿಗೆ ಅವಕಾಶ ಕೊಡುವ ಬಗ್ಗೆ ಸಾರ್ವಜನಿಕರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು

ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಜೆಡಿಎಸ್ ಕೂಡ, ‘ಡುಪ್ಲಿಕೇಟ್ ಸಿಎಂ ಡಿಕೆಶಿ ಅವರ ನವರಂಗಿ ಆಟ ಮತ್ತೆ ಬಯಲಾಗಿದೆ. ಚುನಾವಣೆಗೆ ಮುಂಚೆ ಸೇವ್ ನಂದಿನಿ ಎಂದಿದ್ದವರು ಈಗ ಕಮಿಷನ್ ಆಸೆಗೆ ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ’ ಎಂದು ಜಾತ್ಯತೀತ ಜನತಾದಳ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿತ್ತು.vtu

Key words: Permission, KMF, Amul, product, Namma metro, DK Shivakumar