ಚಿತ್ರದುರ್ಗ ಜಿಲ್ಲೆಗೆ ದೀಪಾವಳಿ ಗಿಫ್ಟ್: ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಒಪ್ಪಿಗೆ…

ಬೆಂಗಳೂರು,ನವೆಂಬರ್,12,2020(www.justkannada.in):  ಚಿತ್ರದುರ್ಗ ಜಿಲ್ಲೆಯ ಜನರ ಬಹುದಿನಗಳ ಬೇಡಿಕೆ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸರ್ಕಾರ ಸಮ್ಮತಿ ಸೂಚಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.kannada-journalist-media-fourth-estate-under-loss

ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಸಿಎಂ ಯಡಿಯೂರಪ್ಪ ನೇತೃತ್ವದ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಸೂಚಿಸಿದೆ ಎನ್ನಲಾಗಿದೆ. ಈ ಮೂಲಕ ಚಿತ್ರದುರ್ಗದ ಜನರಿಗೆ ದೀಪಾವಳಿ  ಗಿಫ್ಟ್ ಆಗಿ ರಾಜ್ಯ ಸರ್ಕಾರ ನೀಡಿದೆ. ಈ ಸಂಬಂಧ ಮೆಡಿಕಲ್ ಕಾಲೇಜು ನಿರ್ಮಾಣ ಸಂಬಂಧ 60 ಕೋಟಿ ಅನುದಾನ ರಿಲೀಸ್ ಗೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.diwali-gift-chitradurga-district-construction-medical-college

ಅಂದಹಾಗೇ, ಈ ಹಿಂದಿನ ಕಾಂಗ್ರೆಸ್ ನೇತೃತ್ವದ ಸರ್ಕಾರ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕಾಗಿ ಬಿಡುಗಡೆ ಮಾಡಬೇಕಿದ್ದ ಅನುದಾನಕ್ಕೆ ತಡೆ ನೀಡಿತ್ತು. ಇದೀಗ ಚಿತ್ರದುರ್ಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ ಬಿಎಸ್ ವೈ ನೇತೃತ್ವದ ಬಿಜೆಪಿ ಸರ್ಕಾರ ಹಸಿರು ನಿಶಾನೆ ತೋರಿದೆ.

english summary…

Deepavali gift to Chitradurga by State Govt.: Gives nod to Medical College
Bengaluru, Nov. 12, 2020 (www.justkannada.in): The State Government has fulfilled a long pending demand of the people of Chitradurga for construction of the Medical College.
The State Cabinet led by Chief Minister Sri B.S. Yedyurappa has approved the establishment of a medical college in Chitradurga, according to sources. The CM has also given his nod to release a sum of Rs. 60 crore for this purpose.
It can be recalled here that the earlier Congress Govt. in the state had withheld the release of grants for construction of the medical college in Chitradurga.

Key words: Diwali Gift – Chitradurga- District-construction – medical college.