ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ ಅಸಮಾಧಾನ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ ಶಾಸಕ ಬಿ.ಆರ್ ಪಾಟೀಲ್.

0
4

ಬೆಂಗಳೂರು,ನವೆಂವರ್,28,2023(www.justkannada.in): ಕೆಆರ್ ಐಡಿಎಲ್ ಕಾಮಗಾರಿ ಸಂಬಂಧ  ಅಸಮಾಧಾನಗೊಂಡಿರುವ  ಅಳಂದ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ಅವರು  ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ರಾಜೀನಾಮೆ ಬಗ್ಗೆ ಪ್ರಸ್ತಾಪಿಸಿದ್ದಾರೆ.

ಬಿಆರ್ ಪಾಟೀಲ್ ಸರ್ಕಾರಕ್ಕೆ ಮತ್ತೆ ತಲೆನೋವಾಗಿದ್ದು, ಕೆಆರ್ ಐಡಿಎಲ್ ಗೆ  ನೀಡಿದ್ದ ಕಾಮಗಾರಿಗಳ ಸಂಬಂಧ ನನ್ನ ವಿರುದ್ದ ಆರೋಪ ಬಂ್ದೆ.   ಲಂಚ ಪಡೆದು ಕಾಮಗಾರಿಗಳನ್ನ ನೀಡಿದ್ದಾರೆ ಎಂಬ ಆರೋಪ ಬಂದಿದೆ.

ಇಂಥ ಆರೋಪಗಳನ್ನ ಹೊತ್ತು ಆಧಿವೇಶನಕ್ಕೆ ಬರುವುದು ಸರಿಯಲ್ಲ. ಅಧಿವೇಶನಕ್ಕೆ ಬಂದರೆ ಆರೋಪ ಒಪ್ಪಿಕೊಂಡಂತಾಗುತ್ತದೆ.  ಹೀಗಾಗಿ ನನ್ನ ವಿರುದ್ದದ ಆರೋಪಗಳ ಸಂಬಂಧ ತನಿಖೆಗೆ ಆದೇಶಿಸಿ. ಆರೋಪ ಸತ್ಯಾಸತ್ಯತೆ ಹೊರಬರಲು ತನಿಖೆಗೆ ಆದೇಶ ನೀಡಿ. ಆರೋಪ ಸಾಬೀತಾದರೇ ರಾಜೀನಾಮೆಗೆ ಸಿದ್ದನಿದ್ದೇನೆ ಎಂದು ಬಿಆರ್ ಪಾಟೀಲ್ ಪತ್ರದಲ್ಲಿ ತಿಳಿಸಿದ್ದಾರೆ.

Key words: Dissatisfied – KRIDL work- MLA -BR Patil – letter – CM Siddaramaiah