Tuesday, August 4, 2026

BDA Apartments

Home Front Page ಉಪಚುನಾವಣೆಯಲ್ಲಿ ಗೆಲುವು ನಮ್ಮದೇ, ಮಂತ್ರಿಯೂ ನಾನೇ- ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅನರ್ಹ ಶಾಸಕ ಹೆಚ್.ವಿಶ್ವನಾಥ್...

ಉಪಚುನಾವಣೆಯಲ್ಲಿ ಗೆಲುವು ನಮ್ಮದೇ, ಮಂತ್ರಿಯೂ ನಾನೇ- ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿದ ಬಳಿಕ ಅನರ್ಹ ಶಾಸಕ ಹೆಚ್.ವಿಶ್ವನಾಥ್ ಹೇಳಿಕೆ…

ಮೈಸೂರು,ನ,15,2019(www.justkannada.in): ನಮ್ಮನ್ನು ಜನರು ಸ್ವೀಕಾರ ಮಾಡ್ತಾರೆ ಎಂಬ ವಿಶ್ವಾಸ ಇದೆ. ಉಪಚುನಾವಣೆಯಲ್ಲಿ ಗೆಲುವು ನಮ್ಮದೇ, ಮಂತ್ರಿಯೂ ನಾನೇ ಎಂದು ಅನರ್ಹ ಶಾಸಕ ಹೆಚ್. ವಿಶ್ವನಾಥ್ ತಿಳಿಸಿದರು.

ಹುಣಸೂರು ರಣಕಣಕ್ಕೆ ಜಿಗಿಯುವ ಮುನ್ನ ಅನರ್ಹ ಶಾಸಕ ಹೆಚ್.ವಿಶ್ವನಾಥ್ ನಾಡದೇವಿಯ ಮೊರೆ ಹೋಗಿದ್ದಾರೆ. ಬೆಳ್ಳಂಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಹೆಚ್.ವಿಶ್ವನಾಥ್ ತಾಯಿ ಚಾಮುಂಡೇಶ್ವರಿಗೆ  ವಿಶೇಷ ಪೂಜೆ ಸಲ್ಲಿಸಿದರು.  ಬಳಿಕ ಮಾತನಾಡಿದ ಅವರು, ಮಹಾನುಭಾವ ರಾಜಕೀಯ ಬುದ್ದಿವಂತರ ನಿರ್ಧಾರ ದಿಂದ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದೆವು. ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರ ಹುನ್ನಾರದಿಂದ ನಮ್ಮನ್ನು ತುಳಿಯುವ ಪ್ರಯತ್ನ ನಡೆದಿತ್ತು. ಅದ್ರೆ ಅವರ ಆಟ ನಡೆಯಲಿಲ್ಲ. ರಣರಂಗದಲ್ಲಿ ಇಳಿಯುವುದಕ್ಕೆ ನಮಗೆ ಸುಪ್ರೀಂ ಅವಕಾಶ ನೀಡಿದೆ. ನಾವು ಅಧಿಕಾರಕೊಸ್ಕರ ರಾಜಿನಾಮೆ ನೀಡಿಲ್ಲ. ನಮ್ಮನ್ನು ಜನರು ಸ್ವೀಕಾರ ಮಾಡ್ತಾರೆ ಎಂಬ ವಿಶ್ವಾಸ ಇದೆ ಎಂದರು.

ರಾಜ್ಯ ರಾಜಕೀಯದಲ್ಲಿ ಶುದ್ದೀಕರಣ ಬಯಸಿ ರಿಸ್ಕ್ ತೆಗೆದುಕೊಂಡಿದ್ದೇನೆ. ನಮ್ಮ ತಾಲ್ಲೂಕಿನ  ಜನ ನನ್ನನ್ನು ಮಾನ್ಯ ಮಾಡಲಿದ್ದಾರೆ. ನನ್ನ ಎದುರಿಗೆ ನಿಂತವರೆಲ್ಲ ಎದುರಾಳಿಗಳೇ. ಸುಮ್ಮನೆ ರಾಜಕೀಯ ಮಾಡ್ತ ಇಲ್ಲ ಕರ್ನಾಟಕ ಜನರ ಅರ್ಶಿವಾದ, ರಾಜರಾಜೇಶ್ವರಿ ಅರ್ಶಿವಾದ , ಚಾಮುಂಡಿಯ ಆರ್ಶಿವಾದ ಇದೆ. ಗೆಲುವು ನಮ್ಮದೇ ಮಂತ್ರಿಯೂ ನಾನೇ ಎಂದು ನುಡಿದರು.

Key words: disqualified MLA- H.Vishwanath –visit –mysore- Chamundihills