ಸಿಎಂ, ಡಿಸಿಎಂ ಹುದ್ದೆ ಬಗ್ಗೆ ಚರ್ಚೆ: ಸ್ವಪಕ್ಷ ಶಾಸಕರಿಗೆ ಡಿ.ಕೆ ಶಿವಕುಮಾರ್ ಖಡಕ್ ವಾರ್ನಿಂಗ್

ಬೆಂಗಳೂರು,ಜೂನ್,29,2024 (www.justkannada.in):  ಇತ್ತೀಚೆಗೆ ರಾಜ್ಯದಲ್ಲಿ ಸಿಎಂ ಬದಲಾವಣೆ ಮತ್ತು  ಹೆಚ್ಚುವರಿ ಡಿಸಿಎಂ ಹುದ್ದೆಗಳ ಬಗ್ಗೆ ಚರ್ಚೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಸ್ವಪಕ್ಷ ಶಾಸಕರಿಗೆ ಡಿಸಿಎಂ ಡಿಕೆ ಶಿವಕುಮಾರ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಡಿಸಿಎಂ ಡಿಕೆ ಶಿವಕುಮಾರ್,  ಹೆಚ್ಚುವರಿ ಡಿಸಿಎಂ ಚರ್ಚೆಯೂ ಇಲ್ಲ.  ಸಿಎಂ ಬದಲಾವಣೆ ಪ್ರಶ್ನೆಯೂ ಇಲ್ಲ. ಇನ್ಮುಂದೆ ಯಾವ ಶಾಸಕನೂ ಈ ಬಗ್ಗೆ ಮಾತನಾಡಬಾರದು. ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡು ಇದ್ರೆ  ಒಳ್ಳೆಯದು  ಸಿಎಂ ಡಿಸಿಎಂ  ಬಗ್ಗೆ ಮಾತನಾಡಿದ್ರೆ ನೋಟಿಸ್ ನೀಡಲಾಗುತ್ತದೆ ಪಕ್ಷದ ಶಿಸ್ತು ಕಾಪಾಡಲು ನೋಟಿಸ್ ನೀಡುತ್ತೇವೆ ಎಂದು ಶಾಸಕರಿಗ ಖಡಕ್ ಸೂಚನೆ ನೀಡಿದ್ದಾರೆ.

Key words: Discussion, CM, DCM, DK Shivakumar, MLAs