ಕಾಂಗ್ರೆಸ್ ನವರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತು ಹೋಗಿದೆ-ವಲಸಿಗರ ವಿರುದ್ದ ಕೆ.ಎಸ್ ಈಶ್ವರಪ್ಪ ಗರಂ.

ಹುಬ್ಬಳ್ಳಿ,ಜೂನ್,26,2023(www.justkannada.in): ಕಾಂಗ್ರೆಸ್ ನವರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತು ಹೋಗಿದೆ ಎಂದು ವಲಸಿಗರ ವಿರುದ್ದ  ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಕಾಂಗ್ರೆಸ್  ನಾಯಕರು ಬಂದ ಮೇಲೆ ಬಿಜೆಪಿಯಲ್ಲಿ ಶಿಸ್ತು ಕಡಿಮೆಯಾಗಿದೆ. ಕಾಂಗ್ರೆಸ್ ನವರವನ್ನ ಕರೆದುಕೊಂಡು ಬಂದು ಅನುಭವಿಸುತ್ತಿದ್ದೇವೆ. ನಾವು ನಾಲ್ಕು ಜನ ಇದ್ದಾಗ ಬಹಳ ಶಿಸ್ತು ಇತ್ತು.. ಕಾಂಗ್ರೆಸ್ ಗಾಳಿ ನಮ್ಮ ಮೇಲೂ ಬೀಸುತ್ತಿದೆ. ಅಶಿಸ್ತು ತೋರುವವರನ್ನು ಬಾಲ ಕಟ್ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.

ಹೊಂದಾಣಿಕೆ ರಾಜಕಾರಣದ ಬಗ್ಗೆ ಮಾತು ದುರ್ದೈವ. ಬಿಜೆಪಿಯಲ್ಲಿ ಇಂತಹ ಚರ್ಚೆಯಾಗುತ್ತಿರುವುದು ದುರ್ದೈವ. ಈ ರೀತಿ ಚರ್ಚಿಸದಂತೆ ತಿಳಿಸಿದ್ದೇನೆ ಎಂದು ಕೆ.ಎಸ್ ಈಶ್ವರಪ್ಪ ಹೇಳಿದರು.

Key words: Discipline – gone – BJP – Congress-KS Eshwarappa