ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಅದು ಅಧಿಸೂಚಿತ ಖಾಯಿಲೆ- ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು, ಜುಲೈ,7,2025 (www.justkannada.in): ಹೃದಯಾಘಾತಕ್ಕೆ ಕೋವಿಡ್ ಲಸಿಕೆ ಕಾರಣವಲ್ಲ: ಹೃದಯಾಘಾತ ಒಂದು ಅಧಿಸೂಚಿತ ಖಾಯಿಲೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಘೋಷಿಸಿದರು.

ರಾಜ್ಯದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣಗಳ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಜ್ಞರ ಜತೆ ಸಭೆ ನಡೆಸಿದರು. ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ದಿನೇಶ್​ ಗುಂಡೂರಾವ್​, ಕೊರೊನಾ ಲಸಿಕೆಯಿಂದ ಹೃದಯಘಾತ ಸಂಭವಿಸಿಲ್ಲ. ವರದಿಯಲ್ಲಿ ಕೊರೊನಾ ದಿಂದ ಗುಣಮುಖರಾದವರಿಗೆ ಹೃದಯಾಘಾತವಾಗಿದೆ ಅಂತ ಇದೆ ಎಂದು ಹೇಳಿದರು.

ಹೃದಯಘಾತವನ್ನು ಸಡನ್ ಡೆತ್ ಅಧಿಸೂಚಿತ ಕಾಯಿಲೆ ಎಂದು ಘೋಷಣೆ ಮಾಡುತ್ತೇವೆ. ಹೃದಯಾಘಾತದಿಂದ ಮೃತಪಟ್ಟವರ ಮರಣೋತ್ತರ ಪರೀಕ್ಷೆ ಮಾಡುವುದು ಕಡ್ಡಾಯ. ಹೃದಯಾಘಾತದ ಬಗ್ಗೆ ಪ್ರತ್ಯೇಕ ಪಠ್ಯ ಅಳವಡಿಕೆ ಮಾಡಲಾಗುವುದು. ಶಿಕ್ಷಣ ಇಲಾಖೆ ಮುಂದಿನ ವರ್ಷದಿಂದ ಪಠ್ಯ ಅಳವಡಿಕೆ ಮಾಡುತ್ತೆ ಎಂದು ಹೇಳಿದರು.

ಡಾ.ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆಯನ್ನು ತಾಲೂಕು ಆಸ್ಪತ್ರೆಗಳಿಗೂ ವಿಸ್ತರಣೆ ಮಾಡಲಾಗುತ್ತದೆ. ಸರ್ಕಾರಿ ನೌಕರರು, ಗುತ್ತಿಗೆ ನೌಕರರು ತಪಾಸಣೆ ಮಾಡಿಸಿಕೊಳ್ಳಬೇಕು. ಜನರ ಜೀವನಶೈಲಿ ಹೃದಯಘಾತಕ್ಕೆ ಕಾರಣವಾಗಿದೆ. ಶೇ 50 ಕ್ಕಿಂತ ಹೆಚ್ಚು ಧೂಮಪಾನಿಗಳಿಗೆ ಹೃದಯಘಾತವಾಗಿದೆ ಎಂದುಸಚಿವ  ದಿನೇಶ್ ಗುಂಡೂರಾವ್ ತಿಳಿಸಿದರು. vtu

Key words: Covid vaccine, not,cause , heart attack,Minister, Dinesh Gundu Rao