ಬಳ್ಳಾರಿ,ಮಾರ್ಚ್,23,2026 (www.justkannada.in): ನಿವೃತ್ತ ಸಂಶೋಧಕರೊಬ್ಬರಿಗೆ ಸೈಬರ್ ವಂಚಕರು ಡಿಜಿಟಲ್ ಅರೆಸ್ಟ್ ಮಾಡಿ 5 ಕೋಟಿ ರೂಪಾಯಿ ವಂಚನೆ ಎಸಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಿವೃತ್ತ ಸಂಶೋಧಕ 94 ವರ್ಷ ವೃದ್ದರೊಬ್ಬರಿಗೆ ಸೈಬರ್ ಚೋರರು ಡಿಜಿಟಲ್ ಅರೆಸ್ಟ್ ಮೂಲಕ ವಂಚಿಸಿ 5 ಕೋಟಿ ದೋಚಿದ್ದಾರೆ. ಮೊದಲು ಟೆಲಿಕಾಂ ಆಫೀಸ್ ನಿಂದ ಅಪರಿಚಿತ ವ್ಯಕ್ತಿ ನಿವೃತ್ತ ಸಂಶೋದಕರಿಗೆ ಕರೆ ಮಾಡಿದ್ದ. ಬಳ್ಳಾರಿಯಲ್ಲಿ ಮಾನವ ಕಳ್ಳ ಸಾಗಾಣಿಕೆ ಕೆಎಸ್ ದಾಖಲಾಗಿದೆ. ಇನ್ಸ್ ಪೆಕ್ಟರ್ ಕರೆ ಮಾಡುತ್ತಾರೆ ಎಂದು ಕಾಲ್ ಕಟ್ ಮಾಡಿದ್ದ. ಬಳಿಕ ಸಂದೀಪ್ ರಾವ್ ಹೆಸರಿನಲ್ಲಿ ವೃದ್ಧನಿಗೆ ಅಪರಿಚಿತ ವ್ಯಕ್ತಿ ಕರೆ ಮಾಡಿದ್ದು ಸಿಬಿಐ ಅಧಿಕಾರಿ ಎಂದು ಆಧಾರ್ ಕಾರ್ಡ್ ವಾಟ್ಸಪ್ಪ್ ಮಾಡಿಸಿಕೊಂಡಿದ್ದಾನೆ.
ಬಳಿಕ ವೃದ್ಧರ ಮೊಬೈಲ್ ನಂಬರ್ ಗೆ ನಕಲಿ ಎಫ್ ಐಆರ್ ಕಳುಹಿಸಿದ್ದು ಆರೋಪಿ ನಂತರ ಸಿಬಿಐ ಪೊಲೀಸರ ರೀತಿ ಡ್ರೆಸ್ ಹಾಕಿ ವಿಡಿಯೋ ಕಾಲ್ ಮಾಡಿ ನಾವು ಹೇಳಿದಂತೆ ಕೇಳಬೇಕು ಎಂದು ಬೆದರಿಕೆ ಹಾಕಿದ್ದಾನೆ.
ಕೊನೆಗೆ ಕೇಸ್ ಕೈ ಬಿಡಲು ಹಣ ಕೊಡಬೇಕು ಎಂದು ಬೇಡಿಕೆ ಇಟ್ಟು ವೃದ್ದರಿಂದ ಹಂತ ಹಂತವಾಗಿ 4.91 ಕೋಟಿ ರೂಪಾಯಿ ಹಣವನ್ನ ವಿವಿಧ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡಿದ್ದಾನೆ. ಇನ್ನು ಹೆಚ್ಚಿನ ಹಣ ಕೇಳಿದಾಗ ವೃದ್ದ ಪೊಲೀಸರ ಮೊರೆ ಹೋಗಿದ್ದು. ಬಳಿಕ ಸೆಂಟ್ರಲ್ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದರು. ಕೇಸ್ ದಾಖಲಿಸಿ ಸೈಬರ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Key words: Digital arrest, Cyber thieves, rob, Rs. 5 crore







