ಕೇಂದ್ರದ  ಸರ್ವಾಧಿಕಾರಿ ಧೋರಣೆಯಿಂದ ಸ್ವಾಯುತ್ತ ಸಂಸ್ಥೆಗಳು ನ್ಯಾಯ ಸಮ್ಮತವಾಗಿ ಕಾರ್ಯನಿರ್ವಹಿಸುವುದು ಅತ್ಯಂತ ಕ್ಲಿಷ್ಟಕರವಾಗಿದೆ- ಎಚ್. ಎ. ವೆಂಕಟೇಶ್

ಮೈಸೂರು,,ಮಾರ್ಚ್,10,2024(www.justkannada.in):  ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಯಿಂದಾಗಿ ಸ್ವಾಯುತ್ತ ಸಂಸ್ಥೆಗಳು ನ್ಯಾಯ ಸಮ್ಮತವಾಗಿ ಹಾಗೂ ಪ್ರಜಾಪ್ರಭುತ್ವದ ವ್ಯಾಪ್ತಿಯೊಳಗೆ ಕಾರ್ಯನಿರ್ವಹಿಸುವುದು ಅತ್ಯಂತ ಕ್ಲಿಷ್ಟಕರವಾಗಿ ಪರಿಣಮಿಸಿದೆ ಇದಕ್ಕೆ ತಾಜಾ ಉದಾಹರಣೆ ರಾಷ್ಟ್ರೀಯ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಅಧಿಕಾರಿಯಾದ ಅರುಣ್ ಗೋಯಿಲ್ ಅವರ ರಾಜೀನಾಮೆ ಪ್ರಸಂಗ. ಕೆಪಿಸಿಸಿ ವಕ್ತಾರ ಎಚ್. ಎ. ವೆಂಕಟೇಶ್ ಹೇಳಿದರು.

ಈ ಕುರಿತು ಪತ್ರಿಕಾ  ಪ್ರಕಟಣೆ ಹೊರಡಿಸಿ ಹೇಳಿದ್ದಿಷ್ಟು..

ಮುಖ್ಯ ಚುನಾವಣಾ ಆಯುಕ್ತರ ಈ ದಿಢೀರ್ ನಿರ್ಧಾರದಿಂದ ಇಡೀ ಚುನಾವಣಾ ವ್ಯವಸ್ಥೆಯನ್ನು ಕೇಂದ್ರ ಸರ್ಕಾರ ನಡೆಸಿಕೊಳ್ಳುತ್ತಿರುವುದರ ಬಗ್ಗೆಯೇ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಂತಾಗಿದೆ. ದೇಶದ ಜನ ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್ ಗಳ ಬಗ್ಗೆ ಮತ್ತಷ್ಟು ಅನುಮಾನ ಪಡುವಂತಹ ವಾತಾವರಣ ಸೃಷ್ಟಿಯಾಗಿದೆ.

ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾದ ನಂತರ ಭಾರತದ ಪ್ರಜಾಪ್ರಭುತ್ವಕ್ಕೆ ಹಂತ ಹಂತವಾಗಿ ಧಕ್ಕೆ ತರುವ ಕೆಲಸಗಳನ್ನು ಮಾಡುತ್ತಿರುವುದು ಸ್ಪಷ್ಟವಾದ ತೊಡಗಿದೆ. ಕೇಂದ್ರ ಸ್ವಾಯತ್ತ ಸಂಸ್ಥೆಗಳಾದ ಚುನಾವಣಾ ಆಯೋಗ , ಆರ್ ಬಿ ಐ. ಸಿಬಿಐ, ಈಡಿ ತರದ ಸಂಸ್ಥೆಗಳು ಈಗ ಕೈಗೊಂಬೆಯಂತೆ ವರ್ತಿಸದಿದ್ದಲ್ಲಿ  ಉಳಿಗಾಲವಿಲ್ಲದಂತಾಗಿದೆ.

ಕಳೆದ ಹತ್ತು ವರ್ಷಗಳ ಮೋದಿಯವರ ಆಡಳಿತವನ್ನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದರೆ ಏನೆಲ್ಲಾ ಅನಾಹುತಗಳಾಗಿವೆ. ಕೇಂದ್ರದ ಸ್ವಯತತ ಸಂಸ್ಥೆಗಳು ಹೇಗೆ ತಮ್ಮ ಅಧಿಕಾರವನ್ನು ಕಳೆದುಕೊಳ್ಳುತ್ತಿವೆ ಮತ್ತು ಸರ್ವಾಧಿಕಾರಿ ಧೋರಣೆಗೆ ಸಿಲುಕಿವೆ ಎಂಬುದು ಸ್ಪಷ್ಟವಾಗುತ್ತದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗೆ ಗೌರ್ನರ್ ಆಗಿ ನೇಮಕಗೊಂಡ ಗೌರ್ನರ್ಗಳು ರಾಜಿನಾಮೆ ಕೊಟ್ಟ ಪ್ರಸಂಗ ಇದೆ ಮೋದಿಯವರ ಅಧಿಕಾರದ ವ್ಯಾಪ್ತಿಯಲ್ಲಿ ನಡೆದಿರುವುದು ಇನ್ನೂ ಮಾಸಿಲ್ಲ .

ಇನ್ನು ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಗಳಿಗೆ ನ್ಯಾಯಾಧೀಶರ ನೇಮಕಾತಿಯಲ್ಲೂ ಕೇಂದ್ರ ಸರ್ಕಾರ ತನ್ನ ಚಿತ್ತಾವಣಿಯನ್ನು ನಿಲ್ಲಿಸಿಲ್ಲ ಹೀಗಾಗಿ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರು ಅಪಸ್ವರ ವ್ಯಕ್ತಿತ್ವ ಕೆಲವರು ರಾಜೀನಾಮೆ ನೀಡಿದ್ದು ನಮ್ಮ ಮುಂದಿದೆ.

ಕೇಂದ್ರ ತನಿಖಾದಳ ಹಾಗೂ ಜಾರಿ ನಿರ್ದೇಶನಾಲಯ ಹೇಗೆ ಕಾರ್ಯನಿರ್ವಹಿಸುತ್ತಿವೆ ಎಂಬುದು ಜಗಜ್ಜಾಗಿರಾಗಿದೆ ಭಾರತೀಯ ಜನತಾ ಪಕ್ಷದ ಅಂಗ ಸಂಘಟನೆಗಳಾಗಿ ಅವುಗಳೀಗ ಕಾರ್ಯನಿರ್ವಹಿಸುತ್ತಿವೆ.

ದೇಶದ ಬಹುದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ಮುಖ್ಯ ಚುನಾವಣಾ ಆಯುಕ್ತರು ರಾಜಿನಾಮೆ ನೀಡಿರುವುದು ಅತ್ಯಂತ ಅನುಮಾನಗಳಿಗೆ ಹಾಗೂ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಮುಖ್ಯ ಚುನಾವಣಾ ಅಧಿಕಾರಿಯು ಸೇರಿದಂತೆ ಮೂರು ಜನ ಇರಬೇಕಾದ ಚುನಾವಣಾ ಆಯೋಗದಲ್ಲಿಗ ಉಳಿದಿರುವುದು ಏಕೈಕ ವ್ಯಕ್ತಿ. ಇದು ಮೋದಿ ಅವರ ಸರ್ಕಾರ ಸಂವಿಧಾನಬದ್ಧ ಪ್ರಜಾಪ್ರಭುತ್ವದ ವ್ಯವಸ್ಥೆ ಮೇಲೆ ಇಟ್ಟಿರುವ ಧೋರಣೆಯನ್ನು ಬಹಿರಂಗಪಡಿಸಿದೆ.

ಮುಖ್ಯ ಚುನಾವಣಾ ಅಧಿಕಾರಿಯಾಗಿದ್ದ ಅರುಣ್ ಗೋಯಲ್ ಅವರನ್ನು 2022 ರಲ್ಲಿ ನೇಮಕ ಮಾಡಿದಾಗಲೇ ಸುಪ್ರೀಂ ಕೋರ್ಟ್ ತರಾತುರಿಯ ನೇಮಕದ ಬಗ್ಗೆ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

ಮುಂದಿನ ಲೋಕಸಭಾ ಚುನಾವಣೆ ಅಲ್ಲದೆ  ಆಂಧ್ರ ಪ್ರದೇಶ, ಒಡಿಸ್ಸಾ, ಸಿಕ್ಕಿಂ ಹಾಗೂ ಅರುಣಾಚಲ ಪ್ರದೇಶದ ವಿಧಾನಸಭಾ ಚುನಾವಣೆಗಳು ನಡೆಯಬೇಕಿದೆ ಇಂತಹ ಸಂದಿಗ್ಧ ಸಮಯದಲ್ಲಿ ಮುಖ್ಯ ಚುನಾವಣಾ ಆಯುಕ್ತರು ರಾಜೀನಾಮೆ ನೀಡುತ್ತಾರೆ ಎಂದರೆ ಕಾರಣವೇನು? ಇದರ ಹಿನ್ನೆಲೆಯೇನು?

ಎಂಬುದನ್ನಿಗ ಮೋದಿ ಸರ್ಕಾರ ರಾಷ್ಟ್ರದ ಜನತೆಗೆ ಬಹಿರಂಗಪಡಿಸಬೇಕಿದೆ ಇಲ್ಲದಿದ್ದಲ್ಲಿ ಕಳೆದ ಹತ್ತು ವರ್ಷಗಳಿಂದ ಇವರು ನಡೆಸಿಕೊಂಡು ಬಂದಿರುವ ಚುನಾವಣಾ ಪ್ರಕ್ರಿಯೆಗಳನ್ನೇ ದೇಶದ ಜನ ಅನುಮಾನಿಸ ಬೇಕಾಗುತ್ತದೆ.

ಅರುಣ್ ಗೋಯಲ್ ಅವರು ಮೋದಿ ಅವರ ಅಥವಾ ಅವರ ಸಂಪುಟ ಸದಸ್ಯರ ಒತ್ತಾಯಕ್ಕೆ ಮಣಿಯದೆ ರಾಜೀನಾಮೆ ನೀಡಿದ್ದಾರೆ ಎಂಬುದೀಗ ಚರ್ಚೆಯಾಗುತ್ತಿದೆ ಈ ಹಿನ್ನೆಲೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಬಳಕೆಯ ಬಗ್ಗೆಯೂ ಅನುಮಾನಗಳು ಗಾಢವಾಗುತ್ತಿವೆ.

ಈ ದೇಶದ ಸಂವಿಧಾನದ ಬಗ್ಗೆ ಭಾರತೀಯ ಜನತಾ ಪಕ್ಷಕ್ಕೆ ಹಾಗೂ ಮೋದಿಯವರ ಸರ್ಕಾರಕ್ಕೆ ಗೌರವ ಇದ್ದಲ್ಲಿ ತತ್ ಕ್ಷಣ ಗೋಯಲ್ ಅವರ ರಾಜೀನಾಮೆ ಕಾರಣವನ್ನು ಬಹಿರಂಗಪಡಿಸಲು ಒತ್ತಾಯಿಸುತ್ತೇನೆ ಎಂದು ಎಚ್. ಎ. ವೆಂಕಟೇಶ್ ಹೇಳಿದ್ದಾರೆ.

Key words: difficult – Central govrnement- kpcc-spokesperson- H. A. Venkatesh