ಊಟ ಬಳಿಕ ಅಸ್ವಸ್ಥಗೊಂಡು ಒಂದೇ ಕುಟುಂಬದ ಮೂವರು ಸಾವು

ರಾಯಚೂರು,ಜುಲೈ,22,2025 (www.justkannada.in): ಊಟ ಮಾಡಿದ ಬಳಿಕ ಹೊಟ್ಟೆ ನೋವು ಕಾಣಿಸಿಕೊಂಡು ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ತಿಮ್ಮಾಪುರ ಗ್ರಾಮದಲ್ಲಿ ನಡೆದಿದೆ.

ತಂದೆ ಇಬ್ಬರು ಮಕ್ಕಳು ಸೇರಿ ಮೂವರು ಸಾವನ್ನಪ್ಪಿದ್ದು, ತಂದೆ ರಮೇಶ್ (35) ಪುತ್ರಿ ನಾಗಮ್ಮ (8) ದೀಪಾ ಮೃತಪಟ್ಟವರು  ಎಂದು ಗುರುತಿಸಲಾಗಿದೆ. ರಿಮ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆದಲ್ಲಿ ದೀಪ (6) (ಮತ್ತೋರ್ವ ಪುತ್ರಿ) ಸಾವನಪ್ಪಿದ್ದಾಳೆ ಎನ್ನಲಾಗಿದೆ.

ಇನ್ನು ರಮೇಶ್  ಇಬ್ಬರು ಮಕ್ಕಳಾದ ಕೃಷ್ಣ, ಚೈತ್ರಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪತ್ನಿ ಪದ್ಮ ಅವರನ್ನು ರಿಮ್ಸ್ ಆಸ್ಪತ್ರೆಗೆ  ಕರೆದೊಯ್ಯಲಾಗಿದೆ.

ನಿನ್ನೆ ರಾತ್ರಿ ಜವಳಿಕಾಯಿ ಪಲ್ಯ, ರೊಟ್ಟಿ, ಅನ್ನ, ಸಾಂಬಾರ್ ಸೇವಿಸಿ ಮಲಗಿದ್ದ ಆರು ಜನರಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದ್ದು ಅಸ್ವಸ್ಥರಾದವರನ್ನ ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ತಂದೆ ರಮೇಶ್ ಹಾಗೂ ಪುತ್ರಿ ನಾಗಮ್ಮ ಮೃತಪಟ್ಟರೆ. ಆಸ್ಪತ್ರೆ ಮಾರ್ಗ ಮಧ್ಯೆ ದೀಪಾ ಸಾವನ್ನಪ್ಪಿದ್ದಾರೆ.vtu

Key words: Three members, same family, die, Food Poisoning