ಸ್ಟಾರ್ ನಟಿಗೆ ಬೆದರಿಕೆ ಹಾಕಿದ್ರಾ ತಲೈವಾ ರಜನಿ ?

ಬೆಂಗಳೂರು, ಸೆಪ್ಟೆಂಬರ್ 26, 2023 (www.justkannada.in): ಇತ್ತೀಚೆಗೆ ತಮಿಳಿನ ಖ್ಯಾತ ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ ಚೆಯ್ಯಾರು ಬಾಲು ಸೂಪರ್ ಸ್ಟಾರ್ ರಜನಿಕಾಂತ್ ಕುರಿತ ಮಾಹಿತಿಯನ್ನು ಹೊರಹಾಕಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ರಜನಿಕಾಂತ್ ಹಾಗೂ ಧನುಷ್ ಮನೆಯವರು ಬೇರಾಗುತ್ತಿರುವ ದಂಪತಿಯನ್ನು ಒಂದು ಮಾಡಲು ಮತ್ತೆ ಪ್ರಯತ್ನಿಸುತ್ತಿದ್ದು, ಹಿರಿಯರಿಗಾಗಿ ಇಬ್ಬರೂ ಮತ್ತೆ ಒಂದಾಗುತ್ತಾರೆ ಎನ್ನಲಾದರೂ ಇದುವರೆಗೂ ಆ ಸಮಯ ಬಂದಿಲ್ಲ. ಆದರೆ ಇಬ್ಬರ ಡಿವೋರ್ಸ್ಗೆ ಕಾರಣ ಏನು ಎಂಬುದು ಇಂದಿಗೂ ಕಗ್ಗಂಟಾಗಿ ಉಳಿದಿದೆ.

ಈ ನಡುವೆ ಧನುಷ್​ ಮತ್ತು ಅಮಲಾ ನಡುವೆ ಆಪ್ತತೆ ಇರುವ ವಿಚಾರ ರಜನಿಕಾಂತ್​ ತಿಳಿದಿದ್ದರು. ಹೀಗಾಗಿ ಅಮಲಾ ಅವರ ಮನೆಗೆ ತೆರಳಿದ ರಜಿನಿಕಾಂತ್​, ಆಕೆಗೆ ವಾರ್ನಿಂಗ್​ ನೀಡಿದ್ದರು ಎಂದು ಸೆಯ್ಯಾರು ಬಾಲು ಮಾಹಿತಿ ನೀಡಿದ್ದರು.

‘ಧನುಷ್ ಜೊತೆಗಿನ ಸಂಬಂಧ ಬಿಟ್ಟು ಬಿಡದಿದ್ದರೆ ನನ್ನ ಇನ್ನೊಂದು ಮುಖ ನೋಡಬೇಕಾಗುತ್ತದೆ’ ಎಂದು ರಜನೀಕಾಂತ್ ಅಮಲಾಗೆ ಬೆದರಿಕೆ ಹಾಕಿದ್ದರಂತೆ ಎಂದು ಚೆಯ್ಯಾರು ಬಾಲು ಹೇಳಿಕೊಂಡಿದ್ದಾರೆ.