ಜ.29ಕ್ಕೆ ಥಿಯೇಟರ್’ನಲ್ಲಿ ‘ಪೊಗರು’ ಆರ್ಭಟ !

ಬೆಂಗಳೂರು, ಜನವರಿ 07, 2021 (www.justkannada.in): ಧ್ರುವಾ ಸರ್ಜಾ ಅಭಿನಯದ ಪೊಗರು ಸಿನಿಮಾ ಮಾತ್ರ ನಾವು ಜನವರಿಯಲ್ಲಿ ಥಿಯೇಟರ್‌ ನಲ್ಲೇ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಜನವರಿ 29ರಂದು ಸಿನಿಮಾ ತೆರೆಗೆ ಮೇಲೆ ತರುವುದಾಗಿ ಚಿತ್ರತಂಡ ನಿರ್ಧರಿಸಿದೆ. ತಮಿಳು ಮತ್ತು ತೆಲುಗಿನಲ್ಲೂ ಬರುತ್ತಿರುವ ಚಿತ್ರವನ್ನು ಅಲ್ಲಿಯೂ ಇದೇ ದಿನ ರಿಲೀಸ್ ಮಾಡಲು ನಿರ್ಧರಿಸಿದ್ದಾರೆ.

ಬಿಗ್‌ಬಜೆಟ್ ಸಿನಿಮಾವನ್ನು ಚಿತ್ರಮಂದಿರದಲ್ಲಿ ರಿಲೀಸ್ ಮಾಡಬೇಕಾ? ಅಥವಾ ಓಟಿಟಿಯಲ್ಲಿ ತೆರೆಗೆ ತರಬೇಕಾ? ಎಂಬ ಬಗ್ಗೆಯೂ ನಿರ್ಮಾಪಕರು ಸಭೆ ಸೇರಿ ಚರ್ಚೆ ನಡೆಸಿದ್ದಾರೆ.