Sunday, October 11, 2026

Dasara Wishes

Happy Dasara
Home Cinema ನಟಿ ಅಮಲಾ ಪಾಲ್ ವಿಚ್ಚೇಧನಕ್ಕೆ ನಟ ಧನುಷ್‌ ಕಾರಣವಂತೆ!

ನಟಿ ಅಮಲಾ ಪಾಲ್ ವಿಚ್ಚೇಧನಕ್ಕೆ ನಟ ಧನುಷ್‌ ಕಾರಣವಂತೆ!

ಬೆಂಗಳೂರು, ಫೆಬ್ರವರಿ 03, 2020 (www.justkannada.in): ನಟಿ ಅಮಲಾ ಪಾಲ್ ವಿಚ್ಚೇಧನಕ್ಕೆ ನಟ ಧನುಷ್‌ ಕಾರಣವಂತೆ!

ಇಂತಹದೊಂದು ಮಾತು ಕಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಿದೆ.

2017 ರಲ್ಲಿ ಅಮಲಾ ಪಾಲ್ ಮತ್ತು ಎ.ಎಲ್.ವಿಜಯ್ ಅವರ ವಿಚ್ಚೇದನಕ್ಕೆ ನಟ ಧನುಷ್‌ ಕಾರಣ ಅಂತ ಎಎಲ್ ವಿಜಯ್ ಅವರ ತಂದೆ ಮತ್ತು ಖ್ಯಾತ ನಿರ್ಮಾಪಕ ಎ.ಎಲ್.ಅಘಗಪ್ಪನ್ ಹೊಸ ಬಾಂಬ್‌ ಸಿಡಿಸಿದ್ದಾರೆ.

ನಿರ್ಮಾಪಕ, ಎ.ಎಲ್.ಅಘಗಪ್ಪನ್ ಅವರು ತಮಿಳು ಚಾನೆಲ್‌ಗೆ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ, ಈ ಬಗ್ಗೆ ಮಾತನಾಡಿದ್ದು, ಇದೇ ವೇಳೆ ಅವರು ಅಮಲಾ ಪಾಲ್ ಅವರು ಮದುವೆಯ ನಂತರ ಚಲನಚಿತ್ರಗಳಿಂದ ದೂರವಿರಲು ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.