Saturday, September 19, 2026

BDA Apartments

ಸಿದ್ದರಾಮಯ್ಯಗೆ ಹೆದರಲು ಅವರೇನು ದೆವ್ವನಾ..? ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್ ...
Home Front Page ಸಿದ್ದರಾಮಯ್ಯಗೆ ಹೆದರಲು ಅವರೇನು ದೆವ್ವನಾ..? ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್

ಸಿದ್ದರಾಮಯ್ಯಗೆ ಹೆದರಲು ಅವರೇನು ದೆವ್ವನಾ..? ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್

ಬೆಂಗಳೂರು, ಅಕ್ಟೋಬರ್, 5,2024 (www.justkannada.in):  ಹೆಚ್.ಡಿ ಕುಮಾರಸ್ವಾಮಿಗೆ ನನ್ನ ಕಂಡರೆ ಭಯ ಎಂದು ಹೇಳಿಕೆ ನೀಡಿದ್ದ ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್.ಡಿ ಕುಮಾರಸ್ವಾಮಿ,  ಸಿಎಂ ಸಿದ್ದರಾಮಯ್ಯಗೆ ಹೆದರಲು ಅವರೇನು ದೆವ್ವನಾ..?  ಅವರು ದೆವ್ವ ಆಗಿದ್ದರೆ ಭಯ ಪಡಬೇಕು. ದೆವ್ವ ಅಲ್ಲ ಅಲ್ವಾ? ಹಾಗಿದ್ದರೆ ನಾನು ಯಾಕೆ ಭಯಪಡಬೇಕು ನನ್ನನ್ನು ಯಾವುದೇ ಕಾರಣಕ್ಕೂ ಹೆದರಿಸಲು ಆಗಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಹೇಳಿದರು.

ತಮ್ಮ ವಿರುದ್ದ ಎಫ್ ಐಆರ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಹೆಚ್​ಡಿ ಕುಮಾರಸ್ವಾಮಿ, ಪ್ರತಿಯೊಂದು ವಿಷಯವನ್ನೂ ಡೈವರ್ಟ್ ಮಾಡಲು ನೋಡುತ್ತಿದ್ದಾರೆ. ಈ ಸರ್ಕಾರ ಎಲ್ಲವನ್ನು ಬಿಟ್ಟಿರುವ ಸರ್ಕಾರ. ಯಾವ ಭಯ ಭಕ್ತಿಯೂ ಇಲ್ಲ, ಗೌರವವೂ ಇಲ್ಲ. ಇದು ಬಂಡ ಸರ್ಕಾರ. ನನ್ನ ಬಳಿ ಇವರದ್ದು, ಯಾರದ್ದು ಏನು ನಡೆಯಲ್ಲ. ಎಫ್‌ಐಆರ್ ಹಾಕಿ ಬೆದರಿಸುವ ತಂತ್ರ ರೂಪಿಸಿದ್ದಾರೆ. ಬೆದರಿಕೆ ಅಲ್ಲದೆ ಇನ್ನೇನು ಇದೆ ಎಫ್‌ಐಆರ್​​​ ನಲ್ಲಿ? ಅದರ ಬಗ್ಗೆ ನಾನು ಚರ್ಚೆ ಮಾಡೋದು ಅನವಶ್ಯಕ. ಕಾಲವೇ ನಿರ್ಧಾರ ಮಾಡುತ್ತದೆ ಎಂದರು.

ಸಿದ್ದರಾಮಯ್ಯಗೆ ಹೆದರಲು ಅವರೇನು ದೆವ್ವನಾ..? ಕೇಂದ್ರ ಸಚಿವ ಹೆಚ್ ಡಿಕೆ ಟಾಂಗ್ ...

Key words: devil, fear, Siddaramaiah, Union Minister, HDK