ದೇಶದಲ್ಲಿ ಒಂದೇ ದಿನ ದಾಖಲೆ ಪ್ರಮಾಣದ ಕೊರೋನಾ ಪಾಸಿಟಿವ್ ಕೇಸ್ ಪತ್ತೆ…

ನವದೆಹಲಿ,ಜು,24,2020(www.justkannada.in): ದೇಶದಲ್ಲಿ ಕೊರೋನಾ ಸೋಂಕಿತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದ್ದು ಒಂದೇ ದಿನ ದಾಖಲೆ ಪ್ರಮಾಣದಲ್ಲಿ ಕೊರೋನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ.jk-logo-justkannada-logo

ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 49,310 ಜನರಲ್ಲಿ  ಕೊರೋನಾ ಸೋಂಕು ದೃಢವಾಗಿದೆ.  ಈ ಕುರಿತು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ  ಮಾಹಿತಿ ನೀಡಿದ್ದು ದೇಶದಲ್ಲಿ  ಕೊರೋನಾ ಸೋಂಕಿತರ ಸಂಖ್ಯೆ 12,87,945ಕ್ಕೆ ಏರಿಕೆಯಾಗಿದೆ.detects-corona-positive-case-one-day-record-country

ಮತ್ತೊಂದೆಡೆ ನಿನ್ನೆ ಒಂದೇ ದಿನ 740 ಮಂದಿ ಬಲಿಯಾಗಿದ್ದು, ಕೊರೋನಾಗೆ ಮೃತಪಟ್ಟವರ ಸಂಖ್ಯೆ 30,601ಕ್ಕೆ ತಲುಪಿದೆ. 12,87,945 ಮಂದಿ ಕೊರೋನಾ ಸೋಂಕಿತರ ಪೈಕಿ 8,17,209 ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದು, ದೇಶದಲ್ಲಿ 4,40,135 ಸಕ್ರಿಯ ಪ್ರಕರಣಗಳಿವೆ.

Key words: Detects- Corona Positive -Case -One Day –Record- Country