ಪಾಳು ಮನೆಯಲ್ಲಿ ಜಿಂಕೆ ಕಳೇಬರ ಪತ್ತೆ: ಜಿಂಕೆ ಶವ ಬಚ್ಚಿಟ್ಟ ಶಂಕೆ.

ಮೈಸೂರು,ಮಾರ್ಚ್,12,2024(www.justkannada.in):  ಪಾಳು ಮನೆಯಲ್ಲಿ ಜಿಂಕೆ ಕಳೇಬರ ಪತ್ತೆಯಾಗಿದ್ದು ಜಿಂಕೆ ಮಾಂಸಕ್ಕಾಗಿ ಜಿಂಕೆ ಶವ ಬಚ್ಚಿಟ್ಟಿರುವ ಶಂಕೆ ವ್ಯಕ್ತವಾಗಿದೆ.

ಹುಣಸೂರು ತಾಲ್ಲೂಕು ಚಿಕ್ಕಹೆಜ್ಜೂರು ಹಾಡಿ ಬಳಿ  ಪಾಳು ಮನೆಯಲ್ಲಿ ಜಿಂಕೆ ಕಳೇಬರ  ಪತ್ತೆಯಾಗಿದೆ. ಬೀದಿ ನಾಯಿಗಳ ದಾಳಿಗೆ ಸಿಲುಕಿ ಮೃತಪಟ್ಟಿದ್ದ ಜಿಂಕೆಯ ಕಳೇಬರ ವನ್ನು ಪಾಳು ಮನೆಯಲ್ಲಿ ಬಚ್ಚಿಟ್ಟಿರುವ ಆರೋಪ ಕೇಳಿ ಬಂದಿದೆ.

ನಾಗರಹೊಳೆ ಉದ್ಯಾನದ ವೀರನಹೊಸಹಳ್ಳಿ ವನ್ಯಜೀವಿ ವಲಯದಂಚಿನ ಚಿಕ್ಕಹೆಜ್ಜೂರು ಹಾಡಿ-2ರಲ್ಲಿ ನೀಲಮ್ಮರಿಗೆ ಸೇರಿದ ಪಾಳು ಮನೆಯಲ್ಲಿ ಸುಮಾರು ಒಂದೂವರೆ ವರ್ಷದ ಗಂಡು ಜಿಂಕೆ ಕಳೇಬರ ಪತ್ತೆಯಾಗಿದೆ.

ಜಿಂಕೆಯನ್ನು ಬೀದಿನಾಯಿಗಳು ಅಟ್ಟಾಡಿಸಿ ಕೊಂದು ಹಾಕಿದ್ದವು. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡುವ ಬದಲು ಕೆಲವರು ಸೇರಿಕೊಂಡು ಮಾಂಸ ತಿನ್ನುವ ಆಸೆಗಾಗಿ ಜಿಂಕೆ ಕಳೇಬರ ವನ್ನು ಬಚ್ಚಿಟ್ಟಿದ್ದರು ಎನ್ನಲಾಗಿದೆ. ಇದೀಗ ಜಿಂಕೆ ಮಾಂಸವನ್ನ ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

Key words: Deer- weed -found i-abandoned- house-hunsur