ಪ್ಯಾರಾಲಿಂಪಿಕ್ ಸಿಲ್ವರ್ ಪದಕ ವಿಜೇತೆ ದೀಪಾ ಮಲೀಕ್, ಭಜರಂಗ್ ಪೂನಿಯಾಗೆ ಖೇಲ್ ರತ್ನ; ರವೀಂದ್ರ ಜಡೇಜಾ ಸೇರಿ 19 ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿ

0
314

ನವದೆಹಲಿ:ಆ-18:(www.justkannada.in) ರಿಯೋ ಪ್ಯಾರಾಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದ ಹರಿಯಾಣದ ದೀಪಾ ಮಲೀಕ್, ಭಜರಂಗ್ ಪೂನಿಯಾಗೆ ದೇಶದ ಪ್ರತಿಷ್ಠಿತ ಕ್ರೀಡಾ ಪುರಸ್ಕಾರ ರಾಜೀವ್ ಗಾಂಧಿ ಖೇಲ್​ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ನಿವೃತ್ತ ನ್ಯಾಯಮೂರ್ತಿ ಮುಕುಂದಕಮ್ ಶರ್ಮ ನೇತೃತ್ವದ 12 ಸದಸ್ಯರ ಪ್ರಶಸ್ತಿ ಆಯ್ಕೆ ಸಮಿತಿ, ಟೀಮ್ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ, ಕರ್ನಾಟಕದ ಈಕ್ವೆಸ್ಟ್ರಿಯನ್ ತಾರೆ ಫವಾದ್ ಮಿರ್ಜಾ ಸೇರಿದಂತೆ 19 ಕ್ರೀಡಾಪಟುಗಳಿಗೆ ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಿದ್ದಾರೆ.

48 ವರ್ಷದ ದೀಪಾ ಮಲೀಕ್, ಶಾಟ್​ಪುಟ್​ನ ಎಫ್53 ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರೆ, ವಿಶ್ವ ನಂ.1 ರೆಸ್ಲರ್ ಆಗಿರುವ ಭಜರಂಗ್ ಪೂನಿಯಾ, 65 ಕೆಜಿ ವಿಭಾಗದಲ್ಲಿ ಕಾಮನ್ವೆಲ್ತ್ ಹಾಗೂ ಏಷ್ಯಾಡ್​ನ ಪದಕ ವಿಜೇತರಾಗಿದ್ದಾರೆ. 17 ವರ್ಷದ ಹಿಂದೆ ಬೆನ್ನುಹುರಿಯಲ್ಲಿ ಆದ ಸಣ್ಣ ಹುಣ್ಣಿನಿಂದಾಗಿ ಕಾಲಿನ ಸ್ವಾಧೀನ ಕಳೆದುಕೊಂಡಿದ್ದ ದೀಪಾ ಮಲಿಕ್, 2012ರಲ್ಲಿ ಅರ್ಜುನ ಪ್ರಶಸ್ತಿ, 2017ರಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದರು.

ಕ್ರಿಕೆಟಿಗರಾದ ರವೀಂದ್ರ ಜಡೇಜಾ, ಪೂನಮ್ ಯಾದವ್​ರೊಂದಿಗೆ ಅಥ್ಲೆಟಿಕ್ಸ್​ನ ತಜಿಂದರ್ ಟೂರ್, ಮೊಹಮದ್ ಅನಾಸ್, ಸ್ವಪ್ನಾ ಬರ್ಮನ್, ಕಬಡ್ಡಿ ತಾರೆ ಅಜಯ್ ಠಾಕೂರ್, ರಾಷ್ಟ್ರೀಯ ಫುಟ್​ಬಾಲ್ ತಂಡದ ಗೋಲ್ಕೀಪರ್ ಗುರುಪ್ರೀತ್ ಸಂಧು, ಶೂಟರ್ ಅಂಜುಮ್ ಮೌದ್ಗಿಲ್​ರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.

ಪ್ಯಾರಾಲಿಂಪಿಕ್ ಸಿಲ್ವರ್ ಪದಕ ವಿಜೇತೆ ದೀಪಾ ಮಲೀಕ್, ಭಜರಂಗ್ ಪೂನಿಯಾಗೆ ಖೇಲ್ ರತ್ನ; ರವೀಂದ್ರ ಜಡೇಜಾ ಸೇರಿ 19 ಕ್ರೀಡಾ ಪಟುಗಳಿಗೆ ಅರ್ಜುನ ಪ್ರಶಸ್ತಿ

Deepa Malik joins Bajrang Punia for Khel Ratna; Ravindra Jadeja, Poonam Yadav among 19 nominated for Arjuna Awards