ಅರುಣ್‌ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರ: ದಿಲ್ಲಿ ಏಮ್ಸ್‌ನತ್ತ ಗಣ್ಯರ ದಂಡು

ನವದೆಹಲಿ, ಆಗಸ್ಟ್ 18, 2019 (www.justkannada.in): ಏಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಮುಖಂಡ, ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್‌ ಜೇಟ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ.

ಅವರಿಗೆ ಜೀವರಕ್ಷಕ ಉಪಕರಣಗಳ ನೆರವು ನೀಡಲಾಗಿದ್ದು, ತಜ್ಞ ವೈದ್ಯರ ತಂಡವೊಂದು ಅವರ ಆರೋಗ್ಯ ಸ್ಥಿತಿಯನ್ನು ನೋಡಿಕೊಳ್ಳುತ್ತಿದೆ. ಆದರೆ ಅವರ ಆರೋಗ್ಯದ ಬಗ್ಗೆ ಆಸ್ಪತ್ರೆಯು ಈವರೆಗೆ ಯಾವುದೇ ಪ್ರಕಟಣೆಯನ್ನು ನೀಡಿಲ್ಲ.

ಅನೇಕ ಮುಖಂಡರು ಆಸ್ಪತ್ರೆಗೆ ಧಾವಿಸಿ ಅವರ ಆರೋಗ್ಯದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌, ಸಚಿವರಾದ ಪೀಯೂಶ್‌ ಗೋಯಲ್‌, ಹರ್ಷವರ್ಧನ್‌, ಬಿಜೆಪಿ ನಾಯಕ ಸತೀಶ್‌ ಉಪಾಧ್ಯಾಯ, ಕಾಂಗ್ರೆಸ್‌ ನಾಯಕರಾದ ಅಭಿಷೇಕ್‌ ಸಿಂಘ್ವಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ, ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ  ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಜೇಟ್ಲಿ ಅವರ ಆರೋಗ್ಯ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದಾರೆ.