Tuesday, August 25, 2026

BDA Apartments

Home Cinema ಇಂದು ಜಾಮೀನು ಅರ್ಜಿ ತೀರ್ಪು: ರಾಗಿಣಿ, ಸಂಜನಾ ಭವಿಷ್ಯ ಇಂದು ನಿರ್ಧಾರ

ಇಂದು ಜಾಮೀನು ಅರ್ಜಿ ತೀರ್ಪು: ರಾಗಿಣಿ, ಸಂಜನಾ ಭವಿಷ್ಯ ಇಂದು ನಿರ್ಧಾರ

ಬೆಂಗಳೂರು, ಸೆಪ್ಟೆಂಬರ್ 21, 2020 (www.justkannada.in): ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ.

ರಾಗಿಣಿ, ಸಂಜನಾ ಹಾಗೂ ಇನ್ನೊಬ್ಬ ಆರೋಪಿ ಶಿವಪ್ರಕಾಶ್ ಜಾಮೀನು ಅರ್ಜಿಯನ್ನು ನ್ಯಾಯಾಲಯ ಸೋಮವಾರಕ್ಕೆ ಮುಂದೂಡಿತ್ತು.

ಸದ್ಯಕ್ಕೆ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದು, ಪರಪ್ಪನ ಅಗ್ರಹಾರದಲ್ಲಿದ್ದಾರೆ. ಇವರ ಬಂಧನ ಅವಧಿ ವಿಸ್ತಾರವಾಗುತ್ತದೋ ಇಲ್ಲವೇ ಜಾಮೀನು ಸಿಗುತ್ತದೋ ಎಂಬುದು ಇಂದು ಗೊತ್ತಾಗಲಿದೆ.