ಮೈಸೂರು ಕಾರಾಗೃಹದಲ್ಲಿ ಕೈದಿ ಸಾವು…

ಮೈಸೂರು,ಸೆಪ್ಟಂಬರ್,8,2020(www.justkannada.in):  ಮೈಸೂರು ಕಾರಾಗೃಹದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ  ಖೈದಿ ಸಾವನ್ನಪ್ಪಿರುವ ಘಟನೆ ನಡೆದಿದೆ.jk-logo-justkannada-logo

ಶಿವಪ್ಪ (55) ಸಾವನ್ನಪ್ಪಿದ ಕೈದಿ. ಅನಾರೋಗ್ಯದಿಂದ ಬಳಲುತ್ತಿದ್ದ ಖೈದಿ  ಶಿವಪ್ಪ ಮೈಸೂರು ಕಾರಾಗೃಹದಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಜಿಲ್ಲೆ ಮುತ್ತತ್ತಿ ಹೋಬಳಿ ಲಾಳನಕೆರೆ ಗ್ರಾಮದ ನಿವಾಸಿಯಾದ ಶಿವಪ್ಪ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.death-prisoner-mysore-jail

ಈ ಕುರಿತು ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Key words: Death – Prisoner – Mysore jail