ಮಾರಣಾಂತಿಕ ಹಲ್ಲೆ ಪ್ರಕರಣ: ಪೇದೆ ಮನ್ಸೂರ್ ಸಂಬಂಧಿ ಕಳವಳ: ಆರೋಪಿಗಳಿಗೆ ಕಠಿಣ ಶಿಕ್ಷೆಗೆ ಆಗ್ರಹ

ಮೈಸೂರು,ಆಗಸ್ಟ್,5,2025 (www.justkannada.in): ರಾಮನಗರ ಡಿಸಿ ಗನ್ ಮ್ಯಾನ್ ಪೊಲೀಸ್ ಪೇದೆ ಮನ್ಸೂರ್ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ  ರಕ್ಷಣೆ ನೀಡಬೇಕಾದವರಿಗೆ ರಕ್ಷಣೆ ಇಲ್ಲದಿರುವುದು ದೊಡ್ಡ ದುರಂತ. ಪೊಲೀಸರು ನಮ್ಮ ರಕ್ಷಣೆ ಮುಂದಾಗಬೇಕು ಎಂದು ಸೈಯದ್ ಮನ್ಸೂರ್ ಸಂಬಂಧಿ ಪಾಷಾ ಆಗ್ರಹಿಸಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಇಂತಹ ಕಿಡಿಗೇಡಿಗಳಿಂದ ಮುಸ್ಲಿಂ ಸಮುದಾಯಕ್ಕೆ ಕೆಟ್ಟ ಹೆಸರು. ಪೊಲೀಸರು ನಮ್ಮ ರಕ್ಷಣೆ ಮುಂದಾಗಬೇಕು. ಸೈಯದ್ ಮನ್ಸೂರ್ ತುಂಬ ಒಳ್ಳೆಹುಡುಗ . ಆ ಕಾರಣಕ್ಕೆ ರಾಮನಗರದ ಡಿಸಿ ಅವರನ್ನು ಗನ್ ಮ್ಯಾನ್ ಆಗಿ ಇಟ್ಟುಕೊಂಡಿದ್ದಾರೆ. ಅನಾರೋಗ್ಯ ಕಾರಣಕ್ಕೆ ರಜೆ ಹಾಕಿ ಊರಿಗೆ ಹೋಗಿದ್ದ. ಸ್ನೇಹಿತರ ಜೊತೆ ಬೈಕ್ ರೇಸ್ ವೀಕ್ಷಣಗೆ ಹೋದ ಮೇಲೆ ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ. ಒಂದೇ ಕುಟುಂಬದವರಾಗಬೇಕಿದ್ದ ಪೊಲೀಸರು ನಮ್ಮ ಹುಡುಗನನ್ನು ಟಾರ್ಗೆಟ್ ಮಾಡಿದ್ದಾರೆ.

ಇದರ ಹಿಂದೆ ಯಾರ ಒತ್ತಡ ಇದೆಯೋ ನಮಗೆ ಗೊತ್ತಿಲ್ಲ ಯಾರೇ ಪ್ರಭಾವಿಗಳಿದ್ದರೂ  ನಮಗೆ ಇಲಾಖೆ ರಕ್ಷಣೆ ಕೊಡಬೇಕು. ತಪ್ಪಿಸ್ಥ ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಪೊಲೀಸರು ಆರೋಪಿಗಳನ್ನು ಶೀಘ್ರ ಬಂಧಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಸೈಯದ್ ಮನ್ಸೂರ್ ಪಾಷಾ ಸಂಬಂಧಿ ಪಾಷಾ  ಒತ್ತಾಯಿಸಿದ್ದಾರೆ.

Key words: deadly ,assault,  police, protect, Mysore