ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ ಭೀಕರ ಅಪಘಾತ: ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆ.

ಧಾರವಾಡ,ಮೇ,21,2022(www.justkannada.in):  ಮದುವೆಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಕ್ರೂಸರ್ ಡಿಕ್ಕಿಯಾಗಿ 9 ಮಂದಿ ಸಾವನ್ನಪ್ಪಿರುವ ಘಟನೆ ಧಾರವಾಡ ತಾಲ್ಲೂಕಿನ ಬಾಡಾ ಗ್ರಾಮದ ಬಳಿ ನಡೆದಿದೆ.

ವರನ ಕಡೆಯವರು ಮದುವೆಗೆ ಹೊರಟ್ಟಿದ್ದ ವೇಳೆ ಈ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಮಹೇಶ್ವರಯ್ಯ(11), ಅನನ್ಯ(14), ಹರೀಶ(13), ಶಿಲ್ಪಾ(34), ನೀಲವ್ವ(60), ಮಧುಶ್ರೀ(20), ಶಂಭುಲಿಂಗಯ್ಯ (35) ಅವರು ಸ್ಥಳದಲ್ಲೇ  ಮೃತಪಟ್ಟಿದ್ದರು. ಸಾವುಬದುಕಿನ ನಡುವೆ ಹೋರಾಡುತ್ತಿದ್ದ ಚನ್ನವ್ವ(45) ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದೀ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಮನುಶ್ರೀ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ.tractor-collision-bike-bike-rider-dies-on-the-spot-mysore

ಧಾರವಾಡ ತಾಲೂಕಿನ ನಿಗದಿ ಗ್ರಾಮದ ಯುವ ಮಂಜುನಾಥ ಮತ್ತು ಸವದತ್ತಿಯ ರೂಪಾ ಅವರ ಮದುವೆ ಶನಿವಾರ ನಿಶ್ಚಯವಾಗಿತ್ತು. ಮನಸೂರ ಬಳಿಯ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯಬೇಕಿತ್ತು. ಶನಿವಾರ  ಬೆಳಿಗ್ಗೆ ಎಲ್ಲರೂ ಮದುವೆ ಮಂಟಪಕ್ಕೆ ಹೊರಟಿದ್ದರು. ದಿಬ್ಬಣ ಹೊರಟ ಕ್ರೂಸರ್​ ವಾಹನ ಮಾರ್ಗಮಧ್ಯೆ ಮರಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಈ ದುರ್ಘಟನೆ ಸಂಭವಿಸಿದೆ.

Key words: Deadly -accident – tree -cruiser – 9 Death