ಬೆಂಗಳೂರು,ಸೆಪ್ಟಂಬರ್,8,2026 (www.justkannada.in): ಕೇಂದ್ರ ಸರ್ಕಾರದ ನಿಯಮಗಳನ್ನ ಹೊರತುಪಡಿಸಿ ಬರ ಘೋಷಣೆ ಮಾಡಲು ಆಗಲ್ಲ ಎಂದು ಡಿಸಿಎಂ ಹಾಗೂ ಕಂದಾಯ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ಬರ ಘೋಷಣೆ ವಿಚಾರಕ್ಕೆ ಶಾಸಕರ ಪತ್ರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಅಧಿವೇಶನದಲ್ಲಿ ನಾನು ಸ್ಪಷ್ಟವಾಗಿ ಹೇಳಿದ್ದೇನೆ ಕೇಂದ್ರದ ನಿಯಮ ಹೊರತುಪಡಿಸಿ ಘೋಷಣೆ ಮಾಡಲು ಆಗಲ್ಲ. ಕೇಂದ್ರ ಸರ್ಕಾರದ ನಿಯಮದನ್ವಯ ಬರ ಘೋಷಣೆ ಮಾಡುತ್ತೇವೆ. ಮೊದಲು 101 ತಾಲ್ಲೂಕುಗಳನ್ನ ಬರ ಎಂದು ಘೋಷಣೆ ಮಾಡಿದ್ದೇವೆ. ಈಗ ಎರಡನೇ ಹಂತದಲ್ಲಿ 25 ತಾಲ್ಲೂಕು ಬರ ಎಂದು ಬಂದಿದೆ. ಆ ತಾಲ್ಲೂಕುಗಳನ್ನು ನಾಳೆ ಅಥವಾ ನಾಡಿದ್ದು ಘೋಷಣೆ ಮಾಡುತ್ತಾರೆ. 200ಕ್ಕೂ ಹೆಚ್ಚು ತಾಲ್ಲೂಕು ಬರಪೀಡಿತ ಆಗುವಂತಹ ಪರಿಸ್ಥಿತಿ ಇದೆ ಎಂದರು.
ಕರಾವಳಿ ಬಿಟ್ಟು ಉಳಿದ ಕಡೆ ಬರ ಪೀಡಿತ ಪ್ರದೇಶ ಆಗಿದೆ. ಆತಂಕ ಪಡುವಂತಹದ್ದು ಏನು ಇಲ್ಲ. ಇಡೀ ರಾಜ್ಯ ಬರಗಾಲದಲ್ಲಿದೆ. ಕರಾವಳಿ ಬಿಟ್ಟು ಎಲ್ಲಾ ತಾಲ್ಲೂಕುಗಳು ಬರಪೀಡಿತ. ನಾವೇ ಡಿಕ್ಲೇರ್ ಮಾಡಿಬಿಟ್ಟರೇ ಸಹಾಯ ಕೇಳೋಕೆ ಆಗಲ್ಲ. ಅದಕ್ಕೆ ಸ್ವಲ್ಪ ಸಹನೆ ಇದ್ದರೆ ಬಹಳ ಒಳ್ಳೆಯದು ಎಂದು ಡಿಸಿಎಂ ಪರಮೇಶ್ವರ್ ತಿಳಿಸಿದರು.
Key words: Drought, declaration, DCM, Parameshwara







