ಇಬ್ಬರು ಸಾಧಕರಿಗೆ ‘ನಾಡೋಜ ಪದವಿ’ ಪ್ರದಾನ ಮಾಡಿದ ಡಿಸಿಎಂ ಡಾ.ಅಶ್ವತ್ಥನಾರಾಯಣ್…

ಹಂಪಿ, ನವೆಂಬರ್,10,2020(www.justkannada.in):  ಶಿಕ್ಷಣ ತಜ್ಞ, ಸಮಾಜ ಸೇವಕ ಡಾ. ವೂಡೇ ಪಿ.ಕೃಷ್ಣ  ಹಾಗೂ ಹೆಸರಾಂತ ವೈದ್ಯ ಡಾ.ಹಣಮಂತಪ್ಪ ಗೋವಿಂದಪ್ಪ ದಡ್ಡಿ (ಎಚ್.ಎಂ.ದಡ್ಡಿ) ಅವರಿಗೆ ಉನ್ನತ ಶಿಕ್ಷಣ ಸಚಿವರೂ ಆದ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಷ್ಠಿತ ನಾಡೋಜ ಪುರಸ್ಕಾರವನ್ನು ಪ್ರದಾನ ಮಾಡಿದರು.dcm-dr-ashwatha-narayanan-presented-nodojas-degree-hampi-nudihabba

ಹಂಪಿ ಕನ್ನಡ ವಿಶ್ವವಿದ್ಯಾಲಯದ ʼಮಂಟಪʼ ಸಭಾಂಗಣದಲ್ಲಿ ಮಂಗಳವಾರ ನಡೆದ 20ನೇ ನುಡಿಹಬ್ಬದಲ್ಲಿ ಈ ಇಬ್ಬರು ಸಾಧಕರನ್ನು ಗೌರವಿಸಿದ ಡಿಸಿಎಂ ಅಶ್ವಥ್ ನಾರಾಯಣ್, ಇದೇ ವೇಳೆ ಅರ್ಹ ವಿದ್ಯಾರ್ಥಿಗಳಿಗೆ ಪಿಎಚ್.ಡಿ, ಡಿ.ಲೀಟ್‌. ಹಾಗೂ ಸ್ನಾತಕೋತ್ತರ ಪದವಿಗಳನ್ನು ಪ್ರದಾನ ಮಾಡಿ ಶುಭ ಹಾರೈಸಿದರು.

ಕೋವಿಡ್‌ ಹಿನ್ನೆಲೆಯಲ್ಲಿ ಸರಳವಾಗಿ ಹಾಗೂ ಸೀಮಿತ ಆಹ್ವಾನಿತರ ನಡುವೆ ನಡೆದ ಈ ಘಟಿಕೋತ್ಸವದಲ್ಲಿ ರಾಷ್ಟ್ರೀಯ ಮೌಲ್ಯಂಕನ ಮತ್ತು ಮಾನ್ಯತಾ ಪರಿಷತ್ತಿನ ನಿರ್ದೇಶಕ ಹಾಗೂ ವಿಶ್ರಾಂತ ಕುಲಪತಿ ಪ್ರೊ.ಎಸ್.ಸಿ.ಶರ್ಮ ಅವರು ಘಟಿಕೋತ್ಸವ ಭಾಷಣ ಮಾಡಿದರು. ಕುಲಪತಿ ಡಾ.ಡಾ.ಸ.ಚಿ. ರಮೇಶ್‌ ಪ್ರಾಸ್ತಾವಿಕ ಭಾಷಣ ಮಾಡಿದರು.

ವಿರೂಪಾಕ್ಷ ದೇವರ ದರ್ಶನ

ಇದಕ್ಕೂ ಮುನ್ನ ಉಪ ಮುಖ್ಯಮಂತ್ರಿ ಅಶ್ವಥ್ ನಾರಾಯಣ್  ಹಂಪಿಯ ಜಗದ್ವಿಖ್ಯಾತ ವಿರೂಪಾಕ್ಷ ದೇಗುಲಕ್ಕೆ ತೆರಳಿ ಶ್ರೀ ವಿರೂಪಾಕ್ಷ ದೇವರ ದರ್ಶನ ಮಾಡಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಸಚಿವ ಆನಂದ್‌ ಸಿಂಗ್‌ ಅವರು ಉಪ ಮುಖ್ಯಮಂತ್ರಿಗಳನ್ನು ಬರಮಾಡಿಕೊಂಡರು. ಪೂಜೆ ನಂತರ ಡಿಸಿಎಂ ಅಶ್ವಥ್ ನಾರಾಯಣ್ ದೇಗುಲವನ್ನು ಹಾಗೂ ಆ ಸುತ್ತಮುತ್ತಲಿನ ಐತಿಹಾಸಿಕ ಸ್ಮಾರಕಗಳನ್ನು ವೀಕ್ಷಿಸಿದರು.dcm-dr-ashwatha-narayanan-presented-nodojas-degree-hampi-nudihabba

ಇದಾದ ಮೇಲೆ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹಲವಾರು ಅಭಿವೃದ್ಧಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು. ಅನುಷ್ಠಾನದ ಹಂತದಲ್ಲಿರುವ ವಿವಿಧ ಯೋಜನೆಗಳ ಬಗ್ಗೆ ಹಾಗೂ ಕೋವಿಡ್‌ ಹಿನ್ನೆಲೆಯಲ್ಲಿ ವಿವಿಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಕುಲಪತಿ ಡಾ.ಸ.ಚಿ. ರಮೇಶ್‌ ಅವರಿಂದ ಮಾಹಿತಿ ಪಡೆದುಕೊಂಡರು. ಕುಲ ಸಚಿವ ಡಾ.ಎ.ಸುಬ್ಬಣ್ಣ ರೈ, ವಿವಿಯ ಪ್ರಾಧ್ಯಾಪಕರು, ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

English summary…

DCM Dr. Ashwathnarayan confers ‘NADOJA AWARD’ on two achievers
Hampi, Nov. 10, 2020 (www.justkannada.in): Educationist and Social Worker Dr. Wooday P. Krishna and renowned doctor Dr. Hanamathappa Govindappa Daddi (H.M. Daddi) were conferred with the prestigious Nadoja award.
Higher Education Minister and Deputy Chief Minister of Karnataka Dr. C.N. Ashwathnarayan presented the awards at a function held at the ‘Mantapa’ auditorium, in Hampi University, on the occasion of the 20th Nudi Habba. Prof. S.C. Sharma, Director, National Assessment and Accreditation Council (NAAC)and former VC Prof. S.C. Sharma presented the convocation speech and Dr. S.C.H. Ramesh made the preliminary speech.

 

Key words: DCM Dr. Ashwatha narayanan- presented – nodojas degree-hampi nudihabba