ಬೆಂಗಳೂರು,ಸೆಪ್ಟಂಬರ್,27,2025 (www.justkannada.in): ಧರ್ಮಸ್ಥಳದ ವಿರುದ್ದ ಅಪಪ್ರಚಾರ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆ ಶಿವಕುಮಾರ್, ದೆಹಲಿಗೆ ಬುರುಡೆ ತೆಗೆದುಕೊಂಡು ಹೋಗಿದ್ದು ಸುಪ್ರೀಂ ಕೋರ್ಟ್ ಗೆ ಪಿಐಎಲ್ ಸಲ್ಲಿಸಿದ್ದು ಎಲ್ಲಾ ಗೊತ್ತು. ವಾಸ್ತವಾಂಶ ಜನರಿಗೆ ತಿಳಿಸಬೇಕು ಅನ್ನೋದು ನಮ್ಮ ಆಸೆ ಎಂದು ಹೇಳಿದ್ದಾರೆ.
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಬುರುಡೆಯನ್ನ ದೆಹಲಿಗೆ ಎತ್ತಿಕೊಂಡು ಹೋಗಿದ್ದು ಗೊತ್ತು, ನಮಗೆ ಆ ಮಾಹಿತಿ ಇದೆ. ಸುಪ್ರೀಂ ಕೋರ್ಟ್ಗೆ ಪಿಐಎಲ್ ಹಾಕಿದ್ದು ಗೊತ್ತು. ಅಲ್ಲಿ ತಿರಸ್ಕರಿಸಿದ್ದು ಗೊತ್ತು. ಆದರೆ ಪೊಲೀಸ್ ಇಲಾಖೆ ಅವರು ತನಿಖೆ ಮಾಡುತ್ತಿದ್ದಾರೆ, ವರದಿ ಕೊಡುತ್ತಾರೆ ಎಂದರು.
ರಾಜಕೀಯ ಯಾರು ಏನು ಬೇಕಾದರೂ ಮಾತನಾಡಬಹುದು. ನಾನು ಮಾತಾಡಿದರೆ ಸರ್ಕಾರದ ಹೇಳಿಕೆ ಆಗುತ್ತದೆ. ಅಂತಿಮ ವರದಿ ಬರಲಿ, ಮಾತನಾಡುತ್ತೇನೆ. ಸಿಎಂ ಮತ್ತು ಗೃಹ ಸಚಿವರು ಅಧಿಕೃತ ಹೇಳಿಕೆ ನೀಡುತ್ತಾರೆ ಎಂದರು.
Key words: Dharmasthala case, DCM, DK Shivakumar