ದೇಶವನ್ನ ಸಂಬಾಳಿಸಲು ಪ್ರಧಾನಿ ಮೋದಿಗೆ ಆಗುತ್ತಿಲ್ಲ- ಡಿಸಿಎಂ ಡಿಕೆ ಶಿವಕುಮಾರ್ ವ್ಯಂಗ್ಯ

ಬೆಂಗಳೂರು,ಮೇ,15,2026 (www.justkannada.in): ಅಂತರಾಷ್ಟ್ರೀಯ ಸಂಬಂಧ ಉಳಿಸಿಕೊಳ್ಳುಲು ಪ್ರಧಾನಿ ಮೋದಿ ವಿಫಲರಾಗಿದ್ದಾರೆ. ದೇಶವನ್ನ ಸಂಬಾಳಿಸಲು ಮೋದಿಗೆ ಆಗುತ್ತಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್ ಲೇವಡಿ ಮಾಡಿದರು.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್,  ಪ್ರಧಾನಿ  ಮೋದಿ ಕೈಯಲ್ಲಿ ಮ್ಯಾನೇಜ್ ಮಾಡಲು ಸಾಧ್ಯವಾಗುತ್ತಿಲ್ಲ. ಕೊರೋನಾ ಸಮಯದಲ್ಲಿ ಘಂಟೆ ಬಾರಿಸಿ ದೀಪ ಹಚ್ಚಿ ಎಂದಿದ್ದರು  ನಿತ್ಯ ಬಳಸುವ ತೈಲವನ್ನು ಹೇಗೆ ಕಂಟ್ರೋಲ್ ಮಾಡಲು ಆಗುತ್ತೆ.  ನಾನು ವಾಹನ ಹೇಗೆ ನಿಲ್ಲಿಸುವುದಕ್ಕೆ ಆಗುತ್ತೆ?  ಅವರಿಗೆ ನೀಡುತ್ತಿದ್ದ 2 ಬೆಂಗಾವಲು ವಾಹನ ಕಡಿಮೆ ಮಾಡಿದ್ದಾರೆ ಅದನ್ನು ದೇಶದಲ್ಲಿರುವ ಬೇರೆಯವರು ಮಾಡಬೇಕು ಅಲ್ವಾ? ಎಂದು ಪ್ರಶ್ನಿಸಿದರು.

ಹೊರದೇಶಕ್ಕೆ ಹೋಗಬಾರದು ಅಂತಾರೆ.  ಅದು ಹೇಗೆ ಆಗುತ್ತೆ?  ಅವರ ದುಡ್ಡು ಅವರು ಹೋಗುತ್ತಾರೆ.  ಚಿನ್ನ ಖರೀದಿಸಬೇಡಿ ಅಂತಾರೆ ಎಲ್ಲರಿಗೂ ಸಣ್ಣ ಚೈನ್ ಬೇಕಾಗುತ್ತೆ. ಮಾಂಗಲ್ಯ ಸರ ತೆಗದುಕೊಳ್ಳಬೇಡಿ ಅಂದರೆ ಹೇಗೆ? ಎಂದು  ಡಿಕೆ ಶಿವಕುಮಾರ್ ಕಿಡಿ ಕಾರಿದರು.

Key words:  PM Modi, country, DCM, DK Shivakumar