ಇನ್ಮುಂದೆ ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ- ಡಿಸಿಎಂ ಡಿ.ಕೆ ಶಿವಕುಮಾರ್

ಬೆಂಗಳೂರು,ಡಿಸೆಂಬರ್,22,2025 (www.justkannada.in):  ಇನ್ನುಮುಂದೆ ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಇಂದು ಮೆಟ್ರೋ ಅಧಿಕಾರಿಗಳ ಜೊತೆಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ  ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್, ಸಂಚಾರ ದಟ್ಟಣೆ ತಗ್ಗಿಸಿ  ಮೆಟ್ರೋ  ಸಂಚಾರ ಹೆಚ್ಚಾಗಬೇಕು. ಬೆಂಗಳೂರಲ್ಲಿ ಸದ್ಯ 96 ಕಿಲೋ ಮೀಟರ್ ವರೆಗೆ ಮೆಟ್ರೋ ಚಾಲನೆಯಲ್ಲಿದೆ. ನಾನು ಬಂದ ಮೇಲೆ 24 ಕಿ.ಮೀ ಹೆಚ್ಚುವರಿ ಸೇರ್ಪಡೆ ಮಾಡಿದ್ದೇನೆ. 2026ರ ಏಪ್ರಿಲ್ ಅಥವಾ ಮೇ ವರೆಗೆ 41 ಕಿ.ಮೀ ಹೊಸದಾಗಿ ಸೇರ್ಪಡೆಯಾಗಲಿದೆ ಎಂದರು.

ಎಲ್ಲೆಲ್ಲಿ ಮೆಟ್ರೋ ನಿಲ್ದಾಣಗಳಿವೆ ಅಲ್ಲಿ ವಾಣಿಜ್ಯ ಚಟುವಟಿಕೆಗೆ ಅವಕಾಶ ನೀಡಲಾಗುತ್ತದೆ. ಇನ್ಮುಂದೆ ಹೊಸ ಮೆಟ್ರೋ ನಿಲ್ದಾಣಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇರಲಿದೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

Key words: Parking system, new metro stations, DCM, D.K. Shivakumar