Friday, October 16, 2026

Dasara Wishes

ಮಾವಿಗೆ ಬೆಂಬಲ ಬೆಲೆ ನೀಡುವಂತೆ ಆಗ್ರಹ: ಇಂದು ಕೋಲಾರ ಬಂದ್ DasraWishes_JK DasraWishes JK
Happy Dasara
Home Front Page ಐದು ಹುಲಿಗಳ ಸಾವು ಕೇಸ್: ಡಿಸಿಎಫ್  ಸಸ್ಪೆಂಡ್

ಐದು ಹುಲಿಗಳ ಸಾವು ಕೇಸ್: ಡಿಸಿಎಫ್  ಸಸ್ಪೆಂಡ್

ಚಾಮರಾಜನಗರ, ಜುಲೈ,15,2025 (www.justkannada.in): ಚಾಮರಾಜನಗರ ಮಲೆ ಮಹದೇವಶ್ವರ ಬೆಟ್ಟದ ಮೀಣ್ಯಂ ಅರಣ್ಯ ಪ್ರದೇಶದಲ್ಲಿ ವಿಷಪ್ರಾಶನದಿಂದ ಐದು ಹುಲಿಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪದಡಿ ಡಿಸಿಎಫ್ ಚಕ್ರಪಾಣಿ ಅವರನ್ನ ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.

ಮಲೆಮಹದೇಶ್ವರ ಬೆಟ್ಟದ ವನ್ಯ ಜೀವಿಧಾಮದಲ್ಲಿ ನಡೆದಿದ್ದ  5 ಹುಲಿ ಸಾವು  ಪ್ರಕರಣ ದೇಶಾದ್ಯಂತ ದೊಡ್ಡ ಸದ್ದು ಮಾಡಿತ್ತು.  ಸತ್ತಹಸುವಿಗೆ ವಿಷಪ್ರಾಶನ ಮಾಡಿದ್ದವರು  ಈಗಾಗಲೇ ಜೈಲು ಪಾಲಾಗಿದ್ದು, ಪ್ರಾಥಮಿಕ ವರದಿಯಲ್ಲಿ ವಿಷ ಪ್ರಾಶನದಿಂದಲೇ ಐದು ಹುಲಿಗಳು  ಸಾವು ಎಂಬ ವರದಿ ಬಹಿರಂಗವಾಗಿದೆ.ಐದು ಹುಲಿಗಳ ಸಾವು ಕೇಸ್: ಡಿಸಿಎಫ್ ಸಸ್ಪೆಂಡ್ suspend

ಇದೀಗ ಪ್ರಕರಣದಲ್ಲಿ ಅಧಿಕಾರಿಗಳ ಕರ್ತವ್ಯ ಲೋಪ ಸಾಬೀತಾದ ಹಿನ್ನೆಲೆಯಲ್ಲಿ  ಐಎಫ್‌ಎಸ್ ಅಧಿಕಾರಿ ಚಕ್ರಪಾಣಿ ಅವರನ್ನ ಅಮಾನತು ಮಾಡಲಾಗಿದೆ. ಚಕ್ರಪಾಣಿ ಅವರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಆಗಿದ್ದರು. ಈ ಹಿಂದೆ ಕಡ್ಡಾಯ ರಜೆಯ ಮೇಲೆ ಕಳುಹಿಸಿತ್ತು. ಚಕ್ರಪಾಣಿ ಕರ್ತವ್ಯ ಲೋಪ ಕಂಡು ಬಂದ ಹಿನ್ನೆಲೆ ಸರ್ಕಾರದಿಂದ ಕಠಿಣ ಕ್ರಮ ಕೈಗೊಳ್ಳಲಾಗಿದೆ.vtu

Key words: DCF, suspended, five tigers, death, Chamarajanagar