ಎಂಸಿಸಿ ಆಯುಕ್ತೆ ಶಿಲ್ಪಾನಾಗ್ ಆರೋಪಕ್ಕೆ ಡಿಸಿ ರೋಹಿಣಿ ಸಿಂಧೂರಿ ಸ್ಪಷ್ಟನೆ

ಮೈಸೂರು, ಜೂನ್ 3, 2021 (www.justkannada.in): ಮೈಸೂರು ನಗರ ಪಾಲಿಕೆ ಆಯುಕ್ತೆ ಶಿಲ್ಪಾನಾಗ್ ಅವರು ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ವ್ಯಕ್ತಪಡಿಸಿರುವ ಅಸಮಾಧಾನ ಹಾಗೂ ಆರೋಪಕ್ಕೆ ಸಂಬಧಪಟ್ಟಂತೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಪ್ರತಿಕ್ರಿಯೆ ನೀಡಿದ್ದಾರೆ.

“ಒಂದು ವೇಳೆ ಯಾವುದೇ ಅಧಿಕಾರಿಗೆ ಏನಾದರೂ ಸಮಸ್ಯೆ ಇದ್ದರೆ ಅದನ್ನು ಬಗೆಹರಿಸಿಕೊಳ್ಳಲು ಆ ವಿಷಯವನ್ನು ಸಂಬಂಧಪಟ್ಟ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ವಿಧಾನವಿದೆ. ಆದರೆ ಈ ಸ್ಥಾನದಲ್ಲಿರುವಂತಹ ಅಧಿಕಾರಿಯೊಬ್ಬರು ಈ ರೀತಿ ಪತ್ರಿಕಾಗೋಷ್ಠಿ ಕರೆದು ಅವಮಾನ ಮಾಡುವುದು ಸರಿಯಲ್ಲ ಎಂದಿದ್ದಾರೆ.

ಮೈಸೂರು ನಗರ ಪಾಲಿಕೆಗೆ ಇತ್ತೀಚಿಗೆ ಎರಡು ಮುಖ್ಯವಾದ ಕೆಲಸಗಳನ್ನು ಅತ್ಯಂತ ಶೀಘ್ರವಾಗಿ ಕೈಗೊಳ್ಳುವಂತೆ ಸೂಚಿಸಲಾಗಿತ್ತು. ಅವುಗಳೆಂದರೆ ಮೈಸೂರು ನಗರ ವ್ಯಾಪ್ತಿಯೊಳಗೆ ಸರ್ಕಾರಿ ಕೋವಿಡ್ ಕೇರ್ ಸೆಂಟರ್‌ಗಳನ್ನು ತೆರೆಯುವುದು ಹಾಗೂ ಸಕ್ರಿಯ ಪ್ರಕರಣಗಳ ಮೇಲೆ ನಿಗಾ ಇಡಲು ಹಾಗೂ ಮೈಸೂರನ್ನು ಈ ಹಿಂದೆ ತಿಳಿಸಿದ್ದಂತೆ ಜುಲೈ ೧ರೊಳಗೆ ಕೋವಿಡ್ ಸೋಂಕುಮುಕ್ತವಾಗಿಸಲು ಪ್ರತಿ ದಿನ ವಾರ್ಡ್ವಾರು ವರದಿಗಳನ್ನು ಸಿದ್ಧಪಡಿಸಿ ಒದಗಿಸುವುದು. ಪ್ರಸ್ತುತ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಒಟ್ಟು ೧೮ ಕೋವಿಡ್ ಕೇರ್ ಸೆಂಟರ್‌ಗಳು ಕಾರ್ಯನಿರ್ವಹಿಸುತ್ತಿದ್ದು, ನಗರದಲ್ಲಿ ೮,೦೦೦ ಸಕ್ರಿಯ ಪ್ರಕರಣಗಳಿವೆ. ಆದರೆ ವಹಿಸಿದ ಕೆಲಸ ಮಾಡದೆ, ನನ್ನನು ಅವಮಾನಿಸಲು ಈ ರೀತಿ ಪತ್ರಿಕಾಗೋಷ್ಠಿ ಕರೆದಿರುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.

I have asked mainly 2 things from the MCC to be done recently –

1.Open Govt CCC in city limits.

( 18 CCCs were functioning in the rural limits , 8000 active cases are there in the city)

2.Daily ward wise reports so that we can track active cases ward wise in our efforts to make Mysuru covid free by July 1st.

If an officer has an issue there is a means of resdressal where it can be brought to the notice of the seniors.

Instead of doing that, calling it harassment through a press conference is uncalled for.