Sunday, October 11, 2026

Dasara Wishes

BJP DasraWishes_JK DasraWishes JK
Happy Dasara
Home Front Page ಡಿ.9 ರಂದು ಸಿಹಿಸುದ್ದಿ ಎಂಬ ಖರ್ಗೆ ಹೇಳಿಕೆ ವಿಚಾರ: ಸಿದ್ಧರಾಮಯ್ಯ ಕೆಳಗಿಳಿಸುವ ಬಗ್ಗೆ ಹೇಳಿರಬೇಕು ಎಂದು...

ಡಿ.9 ರಂದು ಸಿಹಿಸುದ್ದಿ ಎಂಬ ಖರ್ಗೆ ಹೇಳಿಕೆ ವಿಚಾರ: ಸಿದ್ಧರಾಮಯ್ಯ ಕೆಳಗಿಳಿಸುವ ಬಗ್ಗೆ ಹೇಳಿರಬೇಕು ಎಂದು ಟಾಂಗ್ ಕೊಟ್ಟ ಸಚಿವ ಬಸವರಾಜ ಬೊಮ್ಮಾಯಿ…

ದಾವಣಗೆರೆ,ಡಿ,4,2019(www.justkannada.in):  ಡಿಸೆಂಬರ್ 9 ರಂದು ಸಿಹಿಸುದ್ದಿ ನೀಡುತ್ತೇವೆ ಎಂದು ಹೇಳಿಕೆ ನೀಡಿದ್ದ ಕೈ ನಾಯಕ ಮಲ್ಲಿಕಾರ್ಜುನ ಖರ್ಗೆಗೆ  ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ವಿಪಕ್ಷ ಸ್ಥಾನದಿಂದ ಸಿದ್ಧರಾಮಯ್ಯರನ್ನ ಕೆಳಗಿಳಿಸುವ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿರಬೇಕು ಎಂದು ಸಚಿವ ಬಸವರಾಜ ಬೊಮ್ಮಾಯಿ ಟಾಂಗ್ ನೀಡಿದ್ದಾರೆ.

ಈ ಬಗ್ಗೆ ದಾವಣಗೆರೆಯಲ್ಲಿ ಮಾತನಾಡಿದ ಸಚಿವ ಬಸವರಾಜ ಬೊಮ್ಮಾಯಿ, ಸರ್ಕಾರ ಬೀಳಿಸುವುದಕ್ಕಿಂತ ಸಿದ್ಧರಾಮಯ್ಯರನ್ನ ಕೆಳಗಿಳಿಸುವುದು ಸೂಕ್ತ ಎಂದು ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅನಿಸಿರಬೇಕು. ಅದಕ್ಕೆ ಹೀಗೆ ಹೇಳಿದ್ದಾರೆ ಎಂದು ಲೇವಡಿ ಮಾಡಿದರು.

ಜನಪ್ರತಿನಿಧಿಗಳು, ಅಧಿಕಾರಿಗಳ ಹನಿಟ್ರ್ಯಾಪ್ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಈ ಬಗ್ಗೆ ಪೊಲೀಸರು ಕಾನೂನು ಪ್ರಕರಣ ತನಿಖೆ ನಡೆಸುತ್ತಿದ್ದಾರೆ ಎಂದು ಹೇಳಿದರು.

Key words: davanagere- Minister Basavaraja Bommai -Tong –mallikarjuna kharge- downfall – Siddaramaiah